ರಾಜಸ್ಥಾನದ ೨೫೦ ದಲಿತ ಕುಟುಂಬದವರಿಂದ ಹಿಂದೂ ಧರ್ಮ ತ್ಯಾಗ ಮಾಡಿ ಬೌದ್ಧ ಧರ್ಮ ಸ್ವೀಕರ ?

ದುರ್ಗಾದೇವಿಯ ಆರತಿ ಮಾಡಿದ್ದರಿಂದ ಮೇಲ್ಜಾತಿಯವರಿಂದ ಥಳಿಸಿದ ಪ್ರಕರಣ

ಪೊಲೀಸರು, ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಇವರಿಗೆ ದೂರು ನೀಡಿದ್ದರೂ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳದೆ ಇರುವುದರಿಂದ ಈ ನಿರ್ಣಯ !

ಬಾರಾಂ (ರಾಜಸ್ಥಾನ) – ಇಲ್ಲಿಯ ಭೂಲೋನ ಗ್ರಾಮದಲ್ಲಿ ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿಗೆ ಆರತಿ ಮಾಡಿದ್ದರಿಂದ ೨ ದಲಿತ ಯುವಕರಿಗೆ ಮೇಲ್ಜಾತಿಯವರು ಥಳಿಸಿದ್ದರಿಂದ ನೋಂದ ೨೫೦ ದಲಿತ ಕುಟುಂಬದವರು ಹಿಂದೂ ಧರ್ಮದ ತ್ಯಾಗ ಮಾಡಿ ಬೌದ್ಧ ಧರ್ಮ ಸ್ವೀಕರಿಸಿದರು. ಅವರು ಆಂದೋಲನ ನಡೆಸಿ ಅವರ ಮನೆಯಲ್ಲಿರುವ ದೇವತೆಗಳ ಮೂರ್ತಿ ಮತ್ತು ಪ್ರತಿಮೆಗಳು ಇಲ್ಲಿಯ ಬೇಥಲಿ ನದಿಯಲ್ಲಿ ವಿಸರ್ಜಿಸಿದರು.

ಈ ದಲಿತರು ಪೊಲೀಸರಿಗೆ, ಮುಖ್ಯಮಂತ್ರಿಗಳಿಗೆ, ಪ್ರಧಾನಿ ಮತ್ತು ರಾಷ್ಟ್ರಪತಿಯವರೆಗೂ ನ್ಯಾಯಕ್ಕಾಗಿ ಯಾಚಿಸಿದ್ದರು; ಆದರೆ ಥಳಿಸಿರುವ ಆರೋಪಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಈ ರೀತಿಯ ಘಟನೆ ನಡೆದ ನಂತರ ಸಂಬಂಧಿಕರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದರ ಬಗ್ಗೆ ಕಾಂಗ್ರೆಸ್ಸಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಗಮನ ನೀಡುವರೆ ?