ನವದೆಹಲಿ: ‘ತಾಜ್ ಮಹಲ್ ಮೂಲ ಶಿವನ ದೇವಸ್ಥಾನವಾಗಿದೆ, ಎಂದು ಹೇಳುವ ಹಾಗೂ ಅದತ ಸತ್ಯವನ್ನು ಪರಿಶೀಲನೆ ಮಾಡುವಂತೆ ಒತ್ತಾಯಿಸಿದ ಬಿಜೆಪಿ ನಾಯಕ ರಜನೀಶ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಅರ್ಜಿಯು ‘ಪ್ರಸಿದ್ಧಿ ಪಡೆಯಲು ಮಾಡಿದ ಅರ್ಜಿಯಾಗಿದೆ’ ಎಂದು ನ್ಯಾಯಾಲಯ ಹೇಳಿದೆ. ಈ ಅರ್ಜಿಯಲ್ಲಿ ತಾಜ್ ಮಹಲ್ ಸುತ್ತಮುತ್ತ ೨೨ ಕೊಠಡಿಗಳನ್ನು ತೆರೆಯಬೇಕು ಮತ್ತು ಅವುಗಳ ಬಗ್ಗೆ ಸತ್ಯಾಧಾರಿತ ತನಿಖೆ ನಡೆಸಬೇಕು ಎಂದು ಕೋರಲಾಗಿತ್ತು. ನ್ಯಾಯಮೂರ್ತಿ ಎಂ.ಆರ್. ಶಾಹ ಮತ್ತು ನ್ಯಾಯಮೂರ್ತಿ ಎಂ.ಎಂ. ಸುಂದರೆಶ ಇವರ ನ್ಯಾಯಪೀಠವು ಅಲಹಾಬಾದ್ ಉಚ್ಚ ನ್ಯಾಯಾಲಯದ ವಜಾಗೊಳಿಸಿದ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
೧. ಉಚ್ಚ ನ್ಯಾಯಾಲಯವು ಮೇ ೧೨, ೨೦೨೨ ರಂದು ಬಿಜೆಪಿಯ ಅಯೋಧ್ಯೆಯ ಮಾಧ್ಯಮ ಮುಖ್ಯಸ್ಥ ರಜನೀಶ್ ಸಿಂಗ್ ಇವರು ‘ಬೇಜವಾಬ್ದಾರಿ’ ರೀತಿಯಲ್ಲಿ ‘ಸಾರ್ವಜನಿಕ ಹಿತಾಸಕ್ತಿ’ ಯ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರನ್ನು ಉಚ್ಚ ನ್ಯಾಯಾಲಯ ಚಾಟಿ ಬೀಸಿತ್ತು.
೨. ಅರ್ಜಿಯಲ್ಲಿ ‘ಪ್ರಾಚೀನ, ಐತಿಹಾಸಿಕ ಸ್ಮಾರಕ ಅದೇ ರೀತಿ ಪುರಾತತ್ವ ಸ್ಥಳ ಮತ್ತು ಅವಶೇಷ ಅಧಿನಿಯಮ, ೧೯೫೧’ ಮತ್ತು ‘ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆ, ೧೯೫೮’ ರ ಕೆಲವು ನಿಬಂಧನೆಗಳನ್ನು ಬೇರ್ಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು, ಇದರ ಅಡಿಯಲ್ಲಿ ತಾಜ ಹಮಲ, ಫತೇಪಹಪುರ ಸಿಕರಿ, ಆಗ್ರಾದ ಕೋಟೆ ಮತ್ತು ಇತ್ಮಾದ-ಉದ್-ದೌಲಾದ ಗೋರಿ ಐತಿಹಾಸಿಕ ಸ್ಮಾರಕ ಎಂದು ಘೋಷಿಸಲಾಗಹಿತ್ತು