ಬ್ರಿಟನ್ ನ ಭಾರತೀಯ ಮೂಲದ ಗೃಹ ಕಾರ್ಯದರ್ಶಿ ಸುಯೆಲಾ ಬ್ರೆವರ್‌ಮನ್ ರಾಜೀನಾಮೆ

ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ ಪರಿಣಾಮ!

ಲಂಡನ್ (ಬ್ರಿಟನ್) – ಭಾರತೀಯ ಮೂಲದ ಬ್ರಿಟನ್‌ನ ಗೃಹ ಕಾರ್ಯದರ್ಶಿ ಸುಯೆಲಾ ಬ್ರೆವರ್‌ಮನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸುಯೆಲಾ ಅವರು ಸರಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ. ಹಾಗೂ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜೀನಾಮೆ ನೀಡಬೇಕಾಯಿತು ಎಂದೂ ಹೇಳಲಾಗುತ್ತಿದೆ. ಮುಕ್ತ ವ್ಯಾಪಾರ ಒಪ್ಪಂದದ ಸಹಾಯದಿಂದ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2030 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ಸುಯೆಲಾ ಬ್ರೆವರ್‌ಮನ್ ಇವರು, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಬ್ರಿಟನ್‌ನಲ್ಲಿ ವಲಸಿಗರ ಸಂಖ್ಯೆಯು ಹೆಚ್ಚುವುದು ಎಂದು ಅನೇಕ ಭಾರತೀಯ ವಲಸಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಬ್ರಿಟನ್ ನಲ್ಲಿಯೇ ಇರುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರಸ್ತುತ, ಭಾರತೀಯ ಮೂಲದ ವ್ಯಕ್ತಿ ಜಗತ್ತಿನಾದ್ಯಂತ ಎಲ್ಲಿಯಾದರೂ ಆಡಳಿತ ಪಕ್ಷಕ್ಕೆ ಅಥವಾ ಸಂಸ್ಥೆಗೆ ಆಯ್ಕೆಯಾದರೆ ಭಾರತೀಯರು ಹೆಮ್ಮೆಪಡುತ್ತಾರೆ; ಆದರೆ ಭಾರತೀಯ ಮೂಲದ ಈ ಜನರಲ್ಲಿ ಭಾರತದ ಬಗ್ಗೆ ಅಭಿಮಾನವು ಇದ್ದೆ ಇರುವುದು ಎಂದೇನಿಲ್ಲ. ಸುಯೆಲಾ ಬ್ರೆವರ್‌ಮನ್ ಅವರ ವಿರೋಧದಿಂದ ಇದು ಗಮನಕ್ಕೆ ಬರುತ್ತದೆ. ಭಾರತೀಯ ಮೂಲದ ಈ ಜನರು ಎಲ್ಲಿ ನೆಲೆಸುತ್ತಾರೋ ಆ ದೇಶದ ಅಥವಾ ಸಂಬಂಧಪಟ್ಟ ಸಂಸ್ಥೆಯ ಹಿತಾಸಕ್ತಿಗಳನ್ನು ಕಾಪಾಡುತ್ತಾರೆ. ಅವರಿಗೆ ಭಾರತದ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ ಎಂಬುದನ್ನು ಗಮನಿಸಿ !