ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯ ಸಾವು, ಸಾಮೂಹಿಕ ಅತ್ಯಾಚಾರ, ಬಲವಂತ ಗೋಮಾಂಸ ತಿನ್ನಿಸಿದ ಆರೋಪ

ಭರತಪುರ (ರಾಜಸ್ಥಾನ ) – ಇಲ್ಲಿ ಒಬ್ಬ ಮಹಿಳೆಯು ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪಿದ್ದಳು. ಈಗ ಈ ಪ್ರಕರಣದಲ್ಲಿ ಹೊಸ ಮತ್ತು ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಮೃತ ಹುಡುಗಿಯನ್ನು ಅಪಹರಿಸಲಾಗಿತ್ತು.ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ, ಹಾಗೂ ಆಕೆಗೆ ಗೋಮಾಂಸ ಬಲವಂತವಾಗಿ ತಿನ್ನಿಸಿದರು. ಹಾಗೂ ಬಲವಂತವಾಗಿ ನಮಾಜ್ ಪಠಣ ಮಾಡಿಸಿದರು. ‘ ನನ್ನ ಮಗಳನ್ನುಹಿಗ್ಗಾಮುಗ್ಗ ಥಳಿಸಿ ಆಕೆಯ ಹತ್ಯೆ ಮಾಡಲಾಯಿತು, ಎಂದು ಸಂತ್ರಸ್ತೆ ತಂದೆ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯು ಇರ್ಷಾದ,  ಫಯಾಜ್, ವಾಹಿದ್, ಉಸ್ಮಾನ್, ಆಲಿ, ಮತ್ತು ಕಾಸಮ ಇವರ ವಿರುದ್ಧ ಸಿಕ್ರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಹುಡುಗಿಯ ತಂದೆಯು ತಮ್ಮ ಆರೋಪದಲ್ಲಿ ಮುಂದಿನಂತೆ ಹೇಳಿದ್ದಾರೆ. ನನ್ನ ಮಗಳನ್ನು ೯ ತಿಂಗಳ ಹಿಂದೆ ಅಪಹರಿಸಲಾಗಿತ್ತು. ಅಂದಿನಿಂದ ನಾನು ಅವಳನ್ನು ಹುಡುಕುತ್ತಿದ್ದೇನೆ. ನಾಲ್ಕು ತಿಂಗಳ ಹಿಂದೆ ನನ್ನ ಮಗಳಿಂದ ಅಪರಿಚಿತ ಸಂಚಾರ ವಾಣಿಯ ಕ್ರಮಾಂಕದ ಮೂಲಕ ನನ್ನ ಜೊತೆಗೆ ಸಂಪರ್ಕವಾಯಿತು. ಆ ಸಮಯದಲ್ಲಿ ಆಕೆ ತನ್ನನ್ನು ಅಪಹರಿಸಿರುವ ಮಾಹಿತಿ ನೀಡಿದಳು. ಇರ್ಷಾದ್ನು ತನ್ನ ಸಹಚರರೊಂದಿಗೆ ಆಕೆಯ ಅಪಹರಣ ಮಾಡಿದ್ದಾನೆ ಎಂದು ಆಕೆ ಹೇಳಿದಳು. ಸಾಮೂಹಿಕ ಬಲಾತ್ಕಾರದ ನಂತರ ಆಕೆಯನ್ನು ಹತ್ಯೆ ಮಾಡುವ ಬೆದರಿಕೆ ನೀಡಿದ್ದರು, ಎಂದು ಸಹ ಆಕೆ ಹೇಳಿದ್ದಳು. ಈ ಪ್ರಕರಣದಲ್ಲಿ ಪೊಲೀಸರು ಅನ್ವೇಷಣೆ ನಡೆಸುತ್ತಿದ್ದಾರೆ.