ಗಾಝಿಯಾಬಾದ (ಉತ್ತರಪ್ರದೇಶ) ಇಲ್ಲಿಯ ವಿವಾಹಿತ ಮಹಿಳೆಯನ್ನು ಅಪಹರಿಸಿ ೨ ದಿನಗಳ ಕಾಲ ೫ ಜನರಿಂದ ಸಾಮೂಹಿಕ ಬಲಾತ್ಕಾರ

ಬಲಾತ್ಕಾರದ ನಂತರ ದೇಹದಲ್ಲಿ ಕಬ್ಬಿಣದ ಸಲಾಕೆ ಹಾಕಿ ಆಕೆಯನ್ನು ಮೂಟೆಯಲ್ಲಿ ಕಟ್ಟಿ ರಸ್ತೆಯ ಬದಿಗೆ ಎಸೆಯಲಾಗಿತ್ತು !

ಗಾಝಿಯಾಬಾದ (ಉತ್ತರಪ್ರದೇಶ) : ಇಲ್ಲಿಯ ಒಬ್ಬ ವಿವಾಹಿತ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ೨ ದಿನಗಳ ಕಾಲ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ನಂತರ ಆಕೆಯ ದೇಹದಲ್ಲಿ ಕಬ್ಬಿಣದ ಸಲಾಕೆ ಹಾಕಿ ಕೈಕಾಲು ಕಟ್ಟಿ ಆಕೆಯನ್ನು ಒಂದು ಮೂಟೆಯಲ್ಲಿ ಕಟ್ಟಿ ರಸ್ತೆಯ ಬದಿಗೆ ಎಸೆಯಲಾಗಿತ್ತು. ಈ ಮಹಿಳೆಗೆ ದೆಹಲಿಯ ಜೆ ಟಿ ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಹರುಖ್ , ಜಾವೇದ್, ಧೋಲ್, ಔರಂಗಜೇಬ ಅಲಿಯಾಸ್ ಝಹಿರ್ ಮತ್ತು ಅನ್ಯ ಒಬ್ಬನ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಮಹಿಳೆ ತನ್ನಸಹೋದರನ ಹುಟ್ಟುಹಬ್ಬದ ಪ್ರಯುಕ್ತ ದೆಹಲಿಗೆ ಬಂದಿದ್ದಳು. ಇಲ್ಲಿಂದ ಆಕೆ ರಿಕ್ಷಾದಿಂದ ಮನೆಗೆ ಹೋಗಲು ರಿಕ್ಷಾದ ದಾರಿ ಕಾಯುತ್ತಿದ್ದಳು. ಆಗ ಒಂದು ನಾಲ್ಕು ಚಕ್ರದ ವಾಹನದಲ್ಲಿನ ಕೆಲವು ಜನರು ಆಕೆಗೆ ಪಿಸ್ತೂಲಿನ ಭಯ ತೋರಿಸಿ ವಾಹನದಲ್ಲಿ ಕುಳ್ಳಿರಿಸಿ ಕರೆದೊಯ್ದರು ಮತ್ತು ನಿರ್ಜನ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಜನರು ಆಕೆಯ ಪರಿಚಯದವರಾಗಿದ್ದರು.

ಸಂಪಾದಕೀಯ ನಿಲುವು

ಈ ಬಲಾತ್ಕಾರಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸುವ ಅಪೇಕ್ಷಿತವಿದೆ.