ಮುಖ್ಯಮಂತ್ರಿ ಕೇಜ್ರಿವಾಲ್ ಇವರು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಇವರನ್ನು ಭಗತ ಸಿಂಹ ಇವರಿಗೆ ಹೋಲಿಸಿದರು !

ಕ್ರಾಂತಿಕಾರರ ಅವಮಾನ ಮಾಡುವ ಕೇಜ್ರಿವಾಲ್ ಇವರು ಕ್ಷಮೆ ಯಾಚನೆ ಮಾಡಬೇಕೆಂದು ಭಗತ ಸಿಂಹ ಇವರ ಕುಟುಂಬದವರ ಆಗ್ರಹ

ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ

ನವ ದೆಹಲಿ – ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರು ಸಾರಾಯಿ ಹಗರಣದಲ್ಲಿ ಸಿಲುಕಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಅಕ್ಟೋಬರ್ ೧೭ ರಂದು ಅವರಿಗೆ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಉಪಸ್ಥಿತರಿರಲು ಹೇಳಲಾಗಿತ್ತು. ಇದರ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಇವರು ಮನೀಶ್ ಸಿಸೋದಿಯ ಮತ್ತು ಮತ್ತೋರ್ವ ಸಚಿವರಾದ ಸತ್ಯೇಂದ್ರ ಜೈನ ಇವರನ್ನು ಮಹಾನ್ ಕ್ರಾಂತಿಕಾರಕ ಭಗದ ಸಿಂಹ ಇವರಿಗೆ ಹೋಲಿಸಿದ್ದಾರೆ. ಆದ್ದರಿಂದ ಭಗತ ಸಿಂಹ ಇವರ ಕುಟುಂಬದವರು ಅಸಮಧಾನಗೊಂಡಿದ್ದಾರೆ.

‘ಕೇಜ್ರಿವಾಲ್ ಅವರು ಅವರ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕೆಂದು’, ಅವರು ಒತ್ತಾಯಿಸಿದ್ದಾರೆ. ‘ಕೇಜ್ರಿವಾಲ್ ಇವರು ಭಗತ ಸಿಂಹ ಸಹಿತ ಎಲ್ಲಾ ಕ್ರಾಂತಿಕಾರರ ಅವಮಾನ ಮಾಡಿದ್ದಾರೆ’, ಎಂದು ಭಗತ ಸಿಂಹ ಇವರ ಕುಟುಂಬದ ಸದಸ್ಯ ಹರಭಜನ ದತ್ತ ಇವರು ಹೇಳಿದ್ದಾರೆ.

೧. ಶ್ರೀ ದತ್ತ ಇವರು ಮಾತನ್ನು ಮುಂದುವರೆಸುತ್ತಾ, ಭಗತ ಸಿಂಹ ಇವರು ನಡೆಸಿರುವ ಕಾರ್ಯಾಚರಣೆ ಇದೇನು ರಾಜಕೀಯ ಆಟವಾಗಿರಲಿಲ್ಲ. ಅವರು ದೇಶದ ಜನತೆಗಾಗಿ ಅದನ್ನು ಮಾಡಿದ್ದರು. ರಾಜಕೀಯ ಆಟ ಆಡುವ ಮನುಷ್ಯ ಎಂದು ನೇಣುಗಂಬ ಏರಲು ಸಾಧ್ಯವಿಲ್ಲ. ಭಗತ ಸಿಂಹ ಇವರು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ್ದರು. ಈ ಜನರು (ಕೇಜ್ರಿವಾಲ) ವ್ಯವಸ್ಥೆಯ ವಿರುದ್ಧ ಹೋರಾಡದೆ ಅಧಿಕಾರಕ್ಕಾಗಿ ಹೋರಾಡುತ್ತಿದ್ದಾರೆ.

೨. ಭಾಜಪದ ವಕ್ತಾರ ಸಂಬೀತ ಪಾತ್ರ ಇವರು, ಭಗತ ಸಿಂಹ ಇವರ ಹೋಲಿಕೆ ದೆಹಲಿಯ ಸಾರಾಯಿ ಮಾರಾಟ ಮಾಡುವ ವ್ಯಕ್ತಿಯ ಜೊತೆ ಮಾಡಿದ ಅರವಿಂದ ಕೇಜ್ರಿವಾಲ್ ಇವರು ಕ್ಷಮೆ ಯಾಚಿಸಬೇಕೆಂದು ಹೇಳಿದರು.

೩. ದೆಹಲಿಯ ಹೊಸ ಸಾರಾಯಿ ಉತ್ಪಾದನೆ ನಿಯಮದ ಅಡಿಯಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಮೇಲೆ ೧೪೪ ಕೋಟಿ ರೂಪಾಯಿ ಹಗರಣದ ಆರೋಪವಿದೆ. ಈ ಪ್ರಕರಣದಲ್ಲಿ ‘ಸಿಬಿಐ’ಯಿಂದ ಮನೀಶ್ ಸಿಸೋದಿಯ ಮತ್ತು ಇತರ ೧೪ ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರ ತುಲನೆಯನ್ನು ಮಹಾನ ಕ್ರಾಂತಿಕಾರರ ಜೊತೆ ಮಾಡುವ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿಯ ಬೌದ್ಧಿಕ ದಿವಾಳಿತನ !