ಬೆಳ್ತಂಗಡಿ ಭಾಜಪ ಶಾಸಕ ಹರೀಶ್‌ ಪೂಂಜಾ ಇವರ ವಾಹನವನ್ನು ಹಿಂಬಾಲಿಸಿ ಕತ್ತಿ ತೋರಿಸಿ ಬೆದರಿಕೆ !

ಮಂಗಳೂರು – ಬಂಟ್ವಾಳದ ಬೆಳ್ತಂಗಡಿಯ ಭಾಜಪ ಶಾಸಕ ಹರೀಶ್‌ ಪೂಂಜಾ ವಾಹನವನ್ನು ಕೆಲವರು ಹಿಂಬಾಲಿಸಿ ನಿಲ್ಲಿಸಿದರು ಮತ್ತು ಬೈಗುಳ ನೀಡುತ್ತಾ ಕತ್ತಿ ತೋರಿಸಿ ಬೆದರಿಕೆ ನೀಡಿದ ಘಟನೆ ಅಕ್ಟೊಬರ್ ೧೩ ರಂದು ಹೊರವಲಯದ ಫರಂಗಿಪೇಟೆ ಬಳಿ ನಡೆದಿದೆ. ಶಾಸಕ ಪೂಂಜಾ ಇವರು ಬೆಂಗಳೂರಿನಿಂದ ಬೆಳ್ತಂಗಡಿಗೆ ಹೋಗುವಾಗ ಘಟನೆ ನಡೆದಿರುವುದು ತಳಿದುಬಂದಿದೆ. ದಾಳಿಕೋರರು ಪಡೀಲ್ ನಿಂದ ಫರಂಗಿಪೇಟೆ ತನಕ ಹಿಂಬಾಲಿಸಿದರು. ಈ ಘಟನೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಭಾಜಪದ ಸರಕಾರ ಇರುವಾಗ ಓರ್ವ ಶಾಸಕರ ವಾಹನವನ್ನು ಹಿಂಬಾಲಿಸಿ ಬೆದರಿಕೆ ಹಾಕಲಾಗುತ್ತದೆ ಇದು ಪೊಲೀಸರಿಗೆ ನಾಚಿಕೆಯ ಸಂಗತಿಯಾಗಿದೆ ಈ ಕುರಿತು ಸರಕಾರ ಗಂಭೀರವಾಗಿ ನೋಡಬೇಕು !