ಗೋಪಾಲ ಇಟಾಲಿಯಾ ಇವರು ಈಗ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ನಿಂದಿಸಿದರು !

ಆಮ್ ಆದ್ಮಿ ಪಕ್ಷದ ಗುಜರಾತನ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ

ನವ ದೆಹಲಿ – ಆಮ್ ಆದ್ಮಿ ಪಕ್ಷದ ಗುಜರಾತನ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರು ಪ್ರಧಾನಿ ಮೋದಿ ಹಾಗೂ ಹಿಂದೂ ದೇವರ ವಿರೋಧದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಅವರು ಈಗ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗುತ್ತಿದೆ. ಈ ವಿಡಿಯೋ ಭಾಜಪದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ ಮಾಲವಿಯ ಇವರು ‘ಶೇರ್’ ಮಾಡಿದ್ದಾರೆ. ೨೩ ಸೆಕೆಂಡ್‌ನ ಈ ವಿಡಿಯೋದಲ್ಲಿ ಇಟಾಲಿಯಾ ಇವರು ಮೋದಿ ಮತ್ತು ಅವರ ತಾಯಿಯನ್ನು ‘ನಾಟಕ’ವೆಂದು ತೆಗಳುತ್ತಿರುವುದು ಕೇಳಿಸುತ್ತಿದೆ.
ಇಟಾಲಿಯಾ ಇವರನ್ನು ಅಕ್ಟೋಬರ್ ೧೩ ರಂದು ದೆಹಲಿ ಪೋಲಿಸರು ವಶಕ್ಕೆ ಪಡೆದು ಅವರ ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಇಟಾಲಿಯಾ ಇವರು ಮಹಿಳಾ ಆಯೋಗ ಕೂಡ ವಿಚಾರಣೆಗಾಗಿ ಕರೆದಿದ್ದರು. ಅದರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಹಿಳಾ ಆಯೋಗದ ಕಾರ್ಯಾಲಯದ ಹೊರಗೆ ಗದ್ದಲ ನಡೆಸಿದ್ದರು.

ಸಂಪಾದಕೀಯ ನಿಲುವು

ಗುಜರಾತ ಮತ್ತು ಕೇಂದ್ರದಲ್ಲಿ ಭಾಜಪ ಸರಕಾರ ಇರುವಾಗ ಇಟಾಲಿಯಾ ಇವರ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಆಶ್ಚರ್ಯಜನಕವಾಗಿದೆ !