ಕರ್ನಾಟಕದಲ್ಲಿನ ಹಿಜಾಬ್ ನಿಷೇಧ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಹತ್ತಿರ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ನವದೆಹಲಿ – ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ನಿಷೇಧದ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಕುರಿತು ತೀರ್ಪು ನೀಡುವಾಗ ಇಬ್ಬರೂ ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ನೀಡಿದರು. ಆದ್ದರಿಂದ ಈ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಕಡೆಗೆ ವರ್ಗಾಯಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ್ ಮೇಲಿನ ನಿಷೇಧ ಯೋಗ್ಯವಾಗಿದೆ ಎಂದು ಹೇಳಿರುವುದರಿಂದ ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆವಾಹನೆ ನೀಡಿದರು.

೧. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹೇಮಂತ ಗುಪ್ತ ಮತ್ತು ಸುಧಾಂಶು ಧೂಲಿಯ ಇವರ ಮುಂದೆ ಈ ಪ್ರಕರಣದ ವಿಚಾರಣೆ ನಡೆದಿತ್ತು. ಈ ಬಗ್ಗೆ ತೀರ್ಪು ನೀಡುವಾಗ ನ್ಯಾಯಮೂರ್ತಿ ಗುಪ್ತ ಇವರು ನಿಷೇಧವನ್ನು ಬೆಂಬಲಿಸಿದರೇ ನ್ಯಾಯಮೂರ್ತಿ ಧೂಲಿಯ ಅವರು ವಿರೋಧದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಆದ್ದರಿಂದ ಅವರು ಈ ಪ್ರಕರಣ ಮುಖ್ಯ ನ್ಯಾಯಾಧೀಶರ ಹತ್ತಿರ ವರ್ಗಾಯಿಸಲಾಗಿದೆ. ಈ ಪ್ರಕರಣ ಖಂಡ ಪೀಠಕ್ಕೆ ಕೂಡ ವರ್ಗಾಯಿಸಬಹುದು’, ಎಂದು ಹೇಳಲಾಗುತ್ತಿದೆ.

೨. ಮಾರ್ಚ್ ೧೫ ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ‘ಸರಕಾರಿ ಪ್ರೀ-ಯೂನಿವರ್ಸಿಟಿ ಗರ್ಲ್ಸ್ ಕಾಲೇಜ್, ಉಡುಪಿ’ಯ ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ ಧರಿಸಿ ಬರುವ ಅರ್ಜಿ ತಿರಸ್ಕರಿಸಲಾಗಿತ್ತು. ನ್ಯಾಯಾಲಯವು, ‘ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅನಿವಾರ್ಯ ಪರಂಪರೆಯ ಭಾಗವಿಲ್ಲ. ಸಂವಿಧಾನದ ಕಲಂ ೨೫ ಪ್ರಕಾರ ಅದಕ್ಕೆ ಸಂರಕ್ಷಣೆ ನೀಡುವ ಅವಶ್ಯಕತೆ ಇಲ್ಲ.’ ಎಂದು ಹೇಳಿತು. ನ್ಯಾಯಾಲಯದ ಈ ತೀರ್ಪಿಗೆ ಪ್ರಶ್ನಿಸಿ ಕೆಲವು ಹುಡುಗಿಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದರು, ಅದರ ಬಗ್ಗೆ ಈ ತೀರ್ಪು ಬಂದಿದೆ.