ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡುವ ಸಿದ್ಧತೆಯನ್ನು ನಡೆಸುತ್ತಿದೆ ! – ಬ್ರಿಟನ್‌ನ ಗುಪ್ತಚರ ಸಂಸ್ಥೆ

ನವದೆಹಲಿ : ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ, ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ ಹೇಳಿದೆ.

ಬ್ರಿಟನ್‌ನ ಗುಪ್ತಚರ ಸಂಸ್ಥೆ ಜಿ.ಸಿ.ಎಚ್,ಕ್ಯು.ನ ಮುಖ್ಯಸ್ಥ ಸರ್ ಜೆರೆಮಿ ಫ್ಲೆಮಿಂಗ್ ಇವರು, ಚೀನಾ ಬಾಹ್ಯಾಕಾಶದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಚೀನಾ ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ‘ಸ್ಟಾರ್ ವಾರ್ಸ್’ (ಬಾಹ್ಯಾಕಾಶದಲ್ಲಿ ಯುದ್ಧ)ಈ ಚಲನ ಚಿತ್ರದಂತಹ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿದೆ. ಚೀನಾದ ‘ಬಾಯಡು ಸ್ಯಾಟಲೈಟ್ ನೆಟ್ವರ್ಕ್’ಅನ್ನು ಯಾರನ್ನಾದರೂ ಮತ್ತು ಯಾವಾಗ ಬೇಕಾದರೂ ಪತ್ತೆಹಚ್ಚಲು ಬಳಸಬಹುದು. ರಷ್ಯಾ ಮತ್ತು ಚೀನಾದ ಬಳಿ ಉಪಗ್ರಹ ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ; ಆದರೆ ಈಗ ಚೀನಾ ‘ಲೇಸರ್’ ವ್ಯವಸ್ಥೆಯ ಮೇಲೆ ಕೆಲಸ ಮಾಡುತ್ತಿದೆ. ಈ ಮೂಲಕ, ಮಾಹಿತಿ, ಕಣ್ಗಾವಲು ಮತ್ತು ‘ಜಿಪಿಎಸ್’ ಉಪಗ್ರಹವನ್ನು ನಾಶಪಡಿಸಬಹುದು. ಉಪಗ್ರಹವನ್ನು ನಾಶಪಡಿಸಿದರೆ, ಕ್ಷಿಪಣಿಗಳು ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಜಾಗತಿಕವಾಗಿ ತಂತ್ರಜ್ಞಾನದ ಮೇಲೆ ಪ್ರಾಬಲ್ಯ ಸಾಧಿಸಲು ಚೀನಾ ಒದ್ದಾಡುತ್ತಿದೆ. ಚೀನಾವನ್ನು ತಡೆಯಲು ಕಠಿಣ ಕಾರ್ಯಾಚರಣೆಯ ಅಗತ್ಯವಿದೆ ಎಂದು ಹೇಳಿದರು.