ಮೊದಲ ಹೆಂಡತಿಯನ್ನು ಪೋಷಿಸಲು ಸಾಧ್ಯವಾಗದ ಮುಸಲ್ಮಾನ ಎರಡನೆ ವಿವಾಹವಾಗಲು ಸಾಧ್ಯವಿಲ್ಲ !

ಕುರಾನ್ ಉಲ್ಲೇಖ ನೀಡುತ್ತಾ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಮಹತ್ವದ ತೀರ್ಪು

ಪ್ರಯಾಗರಾಜ (ಉತ್ತರಪ್ರದೇಶ) – ಕುರಾನಿನ ಪ್ರಕಾರ ಯಾವ ವ್ಯಕ್ತಿ ಮೊದಲ ಪತ್ನಿಯ ಮತ್ತು ಅವನ ಮಕ್ಕಳ ಯೋಗ್ಯ ರೀತಿಯಲ್ಲಿ ಪೋಷಣೆ ಮಾಡುತ್ತಾನೆ ಆತ ಮಾತ್ರ ಎರಡನೇ ಮದುವೆ ಮಾಡಿಕೊಳ್ಳಲು ಸಾಧ್ಯ ಅದಕ್ಕಾಗಿ ಸಕ್ಷಮನಾಗಿದ್ದಾನೆ. ಆ ವ್ಯಕ್ತಿ ಏನಾದರೂ ಪೋಷಣೆ ಮಾಡುವಲ್ಲಿ ಅಸಮರ್ಥನಾಗಿದ್ದರೆ ಆಗ ಅವನು ಎರಡನೆಯ ವಿವಾಹ ಮಾಡಿಕೊಳ್ಳಲು ಯಾವುದೇ ಅಧಿಕಾರವಿಲ್ಲವೆಂದು ಮಹತ್ವಪೂರ್ಣ ತೀರ್ಪು ಅಲಹಾಬಾದ್ ಉಚ್ಚ ನ್ಯಾಯಾಲಯ ಕುರಾನಿನ ಉಲ್ಲೇಖ ನೀಡುತ್ತ ನಿರ್ಣಯ ತೆಗೆದುಕೊಂಡಿದೆ. ಒಬ್ಬ ಮುಸಲ್ಮಾನ ವ್ಯಕ್ತಿ ಎರಡನೇ ವಿವಾಹಕ್ಕಾಗಿ ಮನವಿ ದಾಖಲಿಸಿದ್ದನು. ಆ ಮನವಿಯ ಮೇಲೆ ನ್ಯಾಯಾಲಯ ಮೇಲಿನ ಉದಾಹರಣೆ ನೀಡುತ್ತಾ ಅದನ್ನು ತಳ್ಳಿ ಹಾಕಿತು.

೧. ನ್ಯಾಯಾಲಯವು, ಯಾವ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುವುದಿಲ್ಲ, ಆ ಸಮಾಜ ಸಭ್ಯ ಎಂದು ತಿಳಿಯಲಾಗುವುದಿಲ್ಲ. ಮಹಿಳೆಯರಿಗೆ ಗೌರವ ನೀಡುವ ದೇಶವೇ ಸಭ್ಯ ದೇಶ ಎಂದು ಹೇಳಬಹುದು. ಮುಸಲ್ಮಾನರು ಮೊದಲ ಹೆಂಡತಿ ಇರುವಾಗ ಇನ್ನೊಂದು ವಿವಾಹವಾಗಲು ತನ್ನನ್ನು ತಡೆಯಬೇಕು. ಕುರಾನದಲ್ಲಿ ಓರ್ವ ಹೆಂಡತಿಗೆ ನ್ಯಾಯ ನೀಡದವ ಇನ್ನೊಂದು ವಿವಾಹವಾಗಲು ಅನುಮತಿಸುವುದಿಲ್ಲ.

೨. ಅರ್ಜಿದಾರ ಅಜಿಜುರೆಹಮಾನ್‌ನು ಹಮಿದುನ್ನಿಶಾ ಜೊತೆ ಮೇ ೧೨, ೧೯೯೯ ರಲ್ಲಿ ವಿವಾಹ ಮಾಡಿಕೊಂಡಿದ್ದನು. ಈಗ ಅಜಿಜುರೆಹಮಾನ್ ಇವನು ಹಮಿದುನ್ನಿಶಾ ಈಕೆಗೆ ಹೇಳದೆ ಎರಡನೇ ವಿವಾಹ ಮಾಡಿಕೊಳ್ಳುವುದು ನಿಶ್ಚಯಿಸಿದ್ದನು. ಈ ಸಂದರ್ಭದಲ್ಲಿ ಅವನು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆದರೆ ಅದರ ಮೇಲೆ ತೀರ್ಪು ಬರದೇ ಇದ್ದರಿಂದ ಅವನು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು.