ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಭಾರತದ ೫೦ ನೇ ಮುಖ್ಯನ್ಯಾಯಾಧೀಶ

ನ್ಯಾಯಮೂರ್ತಿ ಧನಂಜಯ ಯಶವಂತ ಚಂದ್ರಚೂಡ

ನವದೆಹಲಿ – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಧನಂಜಯ ಯಶವಂತ ಚಂದ್ರಚೂಡ ಇವರು ದೇಶದ ೫೦ ನೇ ಮುಖ್ಯ ನ್ಯಾಯಾಧೀಶರಾಗುವವರು. ಪ್ರಸ್ತುತ ಮುಖ್ಯ ನ್ಯಾಯಾಧೀಶರಾದ ಉದಯ ಉಮೇಶ ಲಳಿತ ಇವರು ಅವರ ಉತ್ತರಾಧಿಕಾರಿ ಎಂದು ನ್ಯಾಯಮೂರ್ತಿ ಚಂದ್ರಚೂಡ ಇವರ ಹೆಸರು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಆಗಸ್ಟ್ ೨೬, ೨೦೨೨ ರಂದು ಮುಖ್ಯ ನ್ಯಾಯಾಧೀಶರಾಗಿ ವಿರಾಜಮಾನರಾಗಿರುವ ಉದಯ ಉಮೇಶ ಲಳಿತ ಇವರು ನವೆಂಬರ ೮, ೨೦೨೨ ರಂದು ನಿವೃತ್ತರಾಗುವರು. ಅವರ ಕಾರ್ಯಕಾಲ ಕೇವಲ ೭೪ ದಿನಗಳದ್ದಾಗಿತ್ತು.
ಸರಕಾರವು ಅಕ್ಟೋಬರ್ ೭, ೨೦೨೨ ರಂದು ಪತ್ರ ಬರೆದು ಮುಖ್ಯ ನ್ಯಾಯಾಧೀಶರಾದ ಲಳಿತ ಇವರಿಗೆ ಅವರ ಉತ್ತರಾಧಿಕಾರಿ ನೇಮಿಸಲು ವಿನಂತಿಸಿದ್ದರು. ಅದರ ಪ್ರಕಾರ ಮುಖ್ಯ ನ್ಯಾಯಾಧೀಶರಾದ ಎಲ್ಲಾ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಮೇಲಿನ ಘೋಷಣೆ ಮಾಡಲಾಯಿತು. ಸೇವಾ ಅನುಭವದ ನಿಯಮದ ಪ್ರಕಾರ ಮುಖ್ಯ ನ್ಯಾಯಾಧೀಶರ ನಂತರ ನ್ಯಾಯಮೂರ್ತಿ ಚಂದ್ರಚೂಡ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಎಲ್ಲರಲ್ಲಿ ಹಿರಿಯ ನ್ಯಾಯಮೂರ್ತಿ ಇರುವರು.
ನ್ಯಾಯಮೂರ್ತಿ ಚಂದ್ರಚೂಡ ನವೆಂಬರ್ ೯, ೨೦೨೨ ರಂದು ಹುದ್ದೆಯನ್ನು ಸ್ವೀಕರಿಸುವರು. ಅವರು ನವೆಂಬರ್ ೧೦, ೨೦೨೪ ರಂದು ಸೇವಾ ನಿವೃತ್ತರಾಗುವರು, ಎಂದರೆ ಅವರ ಕಾರ್ಯಕಾಲ ಎರಡು ವರ್ಷದ್ದಾಗಿದೆ.

ತಂದೆಯ ನಂತರ ಮಗ ಮುಖ್ಯ ನ್ಯಾಯಾಧೀಶರಾಗುವುದು ಇದು ಸರ್ವೋಚ್ಚ ನ್ಯಾಯಾಲಯ ಇತಿಹಾಸದ ಮೊದಲ ಉದಾಹರಣೆ ಆಗಿದೆ !

ನ್ಯಾಯಮೂರ್ತಿ ಚಂದ್ರಚೂಡ ಇವರ ತಂದೆ ಯಶವಂತ ವಿಷ್ಣು ಚಂದ್ರಚೂಡ ಇವರು ಫೆಬ್ರವರಿ ೨೨, ೧೯೭೮ ರಿಂದ ಜುಲೈ ೧೧, ೧೯೮೫ ಈ ಸಮಯದಲ್ಲಿ ದೇಶದ ೧೬ ನೇ ಮುಖ್ಯ ನ್ಯಾಯಾಧೀಶರಾಗಿದ್ದರು. ಇಲ್ಲಿಯವರೆಗೆ ಎಲ್ಲಕ್ಕಿಂತ ಹೆಚ್ಚಿನ ಸಮಯ ಮುಖ್ಯ ನ್ಯಾಯಾಧೀಶ ಸ್ಥಾನದಲ್ಲಿ ಇರುವ ಏಕೈಕ ಉದಾಹರಣೆಯಾಗಿದೆ. ತಂದೆಯ ನಂತರ ಮಗ ಮುಖ್ಯ ನ್ಯಾಯಾಧೀಶರಾಗುವುದು, ಇದು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿನ ಮೊದಲ ಉದಾಹರಣೆಯಾಗಿದೆ.