ಯಾವ ಸರಕಾರ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ, ಅವರು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡುವರು !

ಬಾಂಗ್ಲಾದೇಶಿ ಸಂಘಟನೆಯಿಂದ ಭಾರತ ಸರಕಾರದ ಮೇಲೆ ಉದ್ದೇಶಪೂರ್ವಕ ಟಿಪ್ಪಣಿ !

ಢಾಕಾ (ಬಾಂಗ್ಲಾದೇಶ) – ‘ಭಾರತ ಸರಕಾರವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಜಾರಿ ಮಾಡಿದರು. ಯಾರು ತಮ್ಮ ದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲವೋ, ಅವರು ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡುವರು’, ಇಂತಹ ವಿಪರ್ಯಾಸದ ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’, ಈ ಬಾಂಗ್ಲಾದೇಶಿ ಸಂಘಟನೆ ಟ್ವೀಟ್ ಮಾಡಿದೆ. ಅವರು ಟ್ವಿಟ್ ನಲ್ಲಿ ‘#MominporeViolence’ ಈ ಹ್ಯಾಶ್ ಟ್ಯಾಗ್ ಉಪಯೋಗಿಸಿದರು. ಇದರಿಂದ ಅವರು ಬಾಂಗ್ಲಾದಲ್ಲಿನ ಮೋಮಿನಪುರದಲ್ಲಿ ನಡೆದಿರುವ ‘ಮಿಲಾದ್-ಉನ್-ನಬಿ’ ಉತ್ಸವದ ಸಮಯದಲ್ಲಿ (ಮಹಮ್ಮದ್ ಪೈಗಂಬರ್ ಇವರ ಜನ್ಮೋತ್ಸವ) ಮತಾಂಧ ಮುಸಲ್ಮಾನರು ನಡೆಸಿರುವ ಪ್ರಚಂಡ ಹಿಂಸಾಚಾರ ಮತ್ತು ದುಷ್ಕೃತ್ಯಗಳ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಗಮನಕ್ಕೆ ಬರುತ್ತದೆ. ಈ ದಂಗೆಯಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಅನೇಕ ವಾಹನಗಳು ಮತ್ತು ಅಂಗಡಿಗಳನ್ನು ನಾಶಗೊಳಿಸಿದರು.