ಜೋಧಪುರದಲ್ಲಿ (ರಾಜಸ್ಥಾನ) ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ಜೋಧಪುರ – ಇಲ್ಲಿ ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಲಾಯಿತು.

ವಾರ್ತಾ ವಾಹಿನಿಯೊಂದು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ೯, ೨೦೨೨ ರಂದು ಜೋಧಪುರದಲ್ಲಿ ‘ಇದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಮುಸಲ್ಮಾನ ಯುವಕರು ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ‘ಸರ್ ತಾನ್ ಸೆ ಜುದಾ’ ಘೋಷಣೆಗಳನ್ನು ಕೂಗಲಾಯಿತು. ಮೆರವಣಿಗೆಯಲ್ಲಿ ಪೊಲೀಸರು ಉಪಸ್ಥಿತರಿದ್ದರು. ಈ ವಿಚಾರ ತಿಳಿದ ತಕ್ಷಣ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ಸಲ್ಲಿಸಿದರು. ಈ ವೇಳೆ ಪೊಲೀಸರು ಆರೋಪಿ ರೋಷನ್ ಅಲಿಯನ್ನು ತಡರಾತ್ರಿ ಬಂಧಿಸಿದರು. ಆತನ ತನಿಖೆ ನಡೆಯುತ್ತಿದೆ. ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸಿದರು. ಇದಕ್ಕೂ ಮೊದಲು ಸಹ ಜೋಧಪುರದಲ್ಲಿ ಗಲಭೆ ನಡೆದಿತ್ತು.

ಸಂಪಾದಕೀಯ ನಿಲುವು

ಕಾಂಗ್ರೆಸ್ ನ ಆಡಳಿತವಿರುವ ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಅಸ್ತಿತ್ವದಲ್ಲಿದೆಯೇ ?