‘ಅವರ’ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕಿ !
ನವದೆಹಲಿ : ನೀವು ‘ಅವರನ್ನು’ ಎಲ್ಲಿ ನೋಡಿದರೂ ಅವರನ್ನು ಬುದ್ಧಿ ಕಲಿಸಬೇಕು. ಇದಕ್ಕೆ ಒಂದೇ ಒಂದು ಪರಿಹಾರ ಅಂದರೆ ಅವರ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವುದು ! ನಿಮಗೆ ಒಪ್ಪಿಗೆ ಇದೆಯೇ ? ನೀವು ಒಪ್ಪಿದರೆ, ನಿಮ್ಮ ಕೈ ಎತ್ತಿ ನನ್ನೊಂದಿಗೆ ಹೇಳಿ, ‘ನಾವು ‘ಅವರ’ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕುತ್ತೇವೆ. ಅವರ ಅಂಗಡಿಯಿಂದ ನಾವು ಯಾವುದೇ ವಸ್ತುಗಳನ್ನು ಖರೀಧಿಸುವುದಿಲ್ಲ. ನಾವು ಅವರಿಗೆ ಉದ್ಯೋಗ ನೀಡುವುದಿಲ್ಲ, ಎಂದು ಭಾಜಪದ ದೆಹಲಿ ಸಂಸದ ಪ್ರವೇಶ ವರ್ಮಾ ಇವರು ಇಲ್ಲಿ ನಡೆದ ವಿರಾಟ ಹಿಂದೂ ಮಹಾಸಭೆಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೆ ಕರೆ ನೀಡಿದರು. ಆದರೂ, ಈ ಕರೆಯನ್ನು ಮುಸಲ್ಮಾನರ ವಿರುದ್ಧ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ; ಆದರೆ ಸಂಸದ ಪ್ರವೇಶ ವರ್ಮಾ ಸ್ವತಃ ಇದನ್ನು ನಿರಾಕರಿಸಿದ್ದಾರೆ. ಈ ಸಭೆಯನ್ನು ಮನೀಷ ಅವರ ಹತ್ಯೆಯನ್ನು ವಿರೋಧಿಸಿ ಆಯೋಜಿಸಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸಾಜಿದ್, ಆಲಂ, ಬಿಲಾಲ್, ಫೈಜಾನ್, ಮೊಹಸಿನ್ ಮತ್ತು ಶಾಕಿರ್ ಎಂಬುವರನ್ನು ಬಂಧಿಸಲಾಗಿದೆ.
सुदर्शन की मुहिम दंगाईयों का #आर्थिक_बहिष्कार को मंच से उठाया सांसद पर प्रवेश वर्मा ने, बोले हत्यारों का पूर्ण रूप से आर्थिक बहिष्कार होना चाहिए। @p_sahibsingh @BJP4Delhi #BindasBol
pic.twitter.com/Ee067W8rTn— Suresh Chavhanke “Sudarshan News” (@SureshChavhanke) October 9, 2022
ಸಾಂಸದ ವರ್ಮಾ ತಮ್ಮ ಮಾತನ್ನು ಮುಂದುವರೆಸುತ್ತಾ, ಇತ್ತೀಚೆಗೆ ದೆಹಲಿಯ ಸುಂದರನಗರಿಯಲ್ಲಿ ಮನೀಷ ಎಂಬ ಯುವಕನನ್ನು ಮುಸಲ್ಮಾನರು ಕೊಂದಿದ್ದಾರೆ. ನಾನು, ಆ ಹಂತಕರನನ್‌ಉ ಬಹಿಷ್ಕರಿಸುವಂತೆ ಕರೆ ನೀಡಿದ್ದೇನೆ. ಇಂತಹವರು ಉಪಹಾರಗೃಹ ಅಥವಾ ಇನ್ನಾವುದೇ ವ್ಯವಹಾರವನ್ನು ಹೊಂದಿದ್ದರೆ, ಅದರ ಮೇಲೆ ಬಹಿಷ್ಕಾರ ಹೇರಬೇಕು. ಎಲ್ಲಿಯ ತನಕ ಎಲ್ಲ ಹಿಂದೂಗಳು ಸಂಘಟಿತರಾಗುವುದಿಲ್ಲವೋ ಅಲ್ಲಿಯ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುವುದು. ಜಿಹಾದಿಗಳು ದೆಹಲಿಯಲ್ಲಿ ಇಂತಹ ಘಟನೆಗಳನ್ನು ಸೃಷ್ಟಿಸುತ್ತಾರೆ, ಇಲ್ಲಿ ತಮ್ಮ ಸರಕಾರವಿದೆ ಎಂದು ಅವರಿಗೆನಿಸುತ್ತದೆ. ಹಿಂದೂಗಳು ಮತ್ತು ಪೊಲೀಸರು ಇಂತಹವರಿಗೆ ೨೪ ಗಂಟೆಯೊಳಗೆ ತಕ್ಕ ಪಾಠ ಕಲಿಸಲು ಸಾಧ್ಯವಿದೆ. ಅದಕ್ಕಾಗಿ ಬಹಿಷ್ಕರಿಸಬೇಕು. ಈ ಜನರು ಕೈಗಾಡಿಗಳನ್ನು ಇಟ್ಟುಕೊಂಡಿರುತ್ತಾರೆ, ಅವರಿಂದ ತರಕಾರಿಗಳನ್ನು ಖರೀದಿಸುವ ಅಗತ್ಯವಿಲ್ಲ. ಅವರು ಮಂಸ ಮತ್ತು ಮೀನು ಮಾರಾಟ ಅಂಗಡಿಗಳು ಹಾಗೂ ಉಪಹಾರಗೃಹಗಳನ್ನು ನಡೆಸುತ್ತಾರೆ, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಸೂಚಿಸಬೇಕು. ಪರವಾನಗಿ ಇಲ್ಲದಿರುವಂತಹ ಅಂಗಡಿಗಳನ್ನು ಮುಚ್ಚಬೇಕು. ಅವರು ಎಲ್ಲಿ ಕಾಣಿಸಿಕೊಂಡರೂ ಅವರನ್ನು ಬಹಿಷ್ಕರಿಸಬೇಕು ಎಂದು ಹೇಳಿದರು.