ಧಾರ್ಮಿಕ ಭಾವನೆ ನೋಯಿಸುವ ಅಧಿಕಾರ ಯಾರು ನೀಡಿದ್ದಾರೆ ?

‘ರಾಮಾಯಣ’ ಧಾರವಾಹಿಯಲ್ಲಿ ಶ್ರೀ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಇವರ ‘ಆದಿಪುರುಷ’ ನ ಕುರಿತು ಪ್ರಶ್ನೆ !

ಅರುಣ್ ಗೋವಿಲ್

ನವದೆಹಲಿ – ‘ಆದಿಪುರುಷ’ ಈ ಚಲನಚಿತ್ರದ ಒಂದು ದೃಶ್ಯ ನೋಡಿ ಪ್ರಸ್ತುತ ನಾಲ್ಕು ದಿಕ್ಕಿನಿಂದಲೂ ಚರ್ಚೆ, ವಾದ ನಡೆಯುತ್ತಿದೆ. ಕೆಟ್ಟ ವಿಷಯಗಳು ಕಿವಿಯ ಮೇಲೆ ಬೀಳುತ್ತಿದೆ. ‘ರಾಮಾಯಣ’ ಮತ್ತು ‘ಮಹಾಭಾರತ’ ಇವುಗಳಂತ ಎಲ್ಲಾ ಧರ್ಮಗ್ರಂಥಗಳು ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಾಗಿದೆ. ಇದು ನಮ್ಮ ಮನುಷ್ಯನ ಸಭ್ಯತೆಯ ಅಡಿಪಾಯ ಆಗಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಅದನ್ನು ಯಾವುದೇ ರೀತಿಯಲ್ಲಿ ತಿರುಚುವುದು ಯೋಗ್ಯವಲ್ಲ ಎಂದು ರಮಾನಂದ ಸಾಗರ್ ಇವರ ‘ರಾಮಾಯಣ’ ಧಾರಾವಾಹಿಯ ಭಗವಂತ ಶ್ರೀ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ ಅವರು ವ್ಯಕ್ತಪಡಿಸಿದ್ದಾರೆ.

‘ಇಂದಿನ ಕಾಲದಲ್ಲಿ ಸನಾತನ ಧರ್ಮದ ಬಗ್ಗೆ ಕೇವಲವಾಗಿ ವರ್ತಿಸುವ ಪದ್ಧತಿ ಆರಂಭವಾಗಿದೆ. ಇವರಿಗೆ ಈ ರೀತಿಯ ಕಿಡಿಗೇಡಿತನ ಮಾಡಿ ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಧಿಕಾರ ಯಾರು ನೀಡಿದ್ದಾರೆ ? ಕಲಾವಿದರು ಮತ್ತು ನಿರ್ದೇಶಕರು ಚಲನಚಿತ್ರ ನಿರ್ಮಾಣದ ಸ್ವಾತಂತ್ರ್ಯದ ಹೆಸರಿನಲ್ಲಿ ಪರಂಪರೆಯನ್ನು ತಿರುಚಬಾರದು’, ಎಂಬ ಎಚ್ಚರಿಕೆ ಕೂಡ ನೀಡಿದರು.

(ಸೌಜನ್ಯ : TIMES NOW Navbharat)

ಅರುಣ್ ಗೋವಿಲ ಅವರು ಮಾತು ಮುಂದುವರಿಸಿ

೧. ನಮ್ಮ ಧರ್ಮಗ್ರಂಥದಿಂದ ನಮಗೆ ಸಂಸ್ಕಾರ ಸಿಗುತ್ತದೆ, ಬದುಕುವ ಆಧಾರ ಸಿಗುತ್ತದೆ, ನಮ್ಮ ಈ ಪರಂಪರೆ ನಮಗೆ ಬದುಕುವ ಕಲೆ ಕಲಿಸುತ್ತದೆ. ನಮ್ಮ ಸಂಸ್ಕೃತಿ ಇದು ಜಗತ್ತಿನಲ್ಲಿನ ಎಲ್ಲಕ್ಕಿಂತ ಹಳೆಯ ಸಂಸ್ಕೃತಿಯಾಗಿದೆ. ಇಂಥ ಸ್ಥಿತಿಯಲ್ಲಿ ಮೂಲ ವಿಷಯ ತಿರುಚಿವುದರಿಂದ ಧಾರ್ಮಿಕ ಭಾವನೆ ನೋಯಿಸಲಾಗುತ್ತದೆ.

೨. ಎರಡುವರೆ ವರ್ಷದ ಹಿಂದೆ ಯಾವಾಗ ಕೋರೋನಾ ಬಂದಿತ್ತು ಆಗ ನಮ್ಮ ಧಾರ್ಮಿಕ ಶ್ರದ್ಧೆ ದೃಢವಾಗಿತ್ತು. ಅಷ್ಟೇ ಅಲ್ಲದೆ ಆ ಕೊರೋನಾ ಕಾಲದಲ್ಲಿ ಮತ್ತೊಮ್ಮೆ ‘ರಾಮಾಯಣ’ ಪುನರ್ ಪ್ರಸಾರ ಮಾಡಲಾಯಿತು. ಆಗಲೂ ಕೂಡ ಅದು ವಿಶ್ವ ದಾಖಲೆ ನಿರ್ಮಿಸಿತು. ಇಂದಿನ ನಮ್ಮ ಯುವ ಪೀಳಿಗೆ ೩೫ ವರ್ಷಗಳ ಹಿಂದೆ ನಿರ್ಮಿಸಿರುವ ರಾಮಾಯಣ ಸಂಪೂರ್ಣ ಶ್ರದ್ಧೆಯಿಂದ ವೀಕ್ಷಿಸಿದರು ಎಂದು ಹೇಳಿದರು.