ಉತ್ತರಪ್ರದೇಶದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮುಸಲ್ಮಾನ್ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರಿಂದ ಆತ್ಮಹತ್ಯೆ

ಅಂಬೇಡ್ಕರ ನಗರ (ಉತ್ತರ ಪ್ರದೇಶ) – ಇಲ್ಲಿ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಮುಸಲ್ಮಾನರಿಂದ ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳದೇ ಇದ್ದರಿಂದ ಸಂತ್ರಸ್ತೇಯು ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರೂ ಪೊಲೀಸ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
೧೫ ವರ್ಷದ ಹುಡುಗಿಯನ್ನು ಸೆಪ್ಟೆಂಬರ್ ೧೬ ರಂದು ಅಪಹರಿಸಲಾಗಿತ್ತು. ಅರ್ಶದ್ ಎಂಬ ಯುವಕನು ಅವನ ಸಹಚರರ ಜೊತೆ ಈಕೆಯನ್ನು ಅಪಹರಿಸಿದ್ದನು. ಸಪ್ಟೆಂಬರ್ ೧೮ ರಂದು ಆಕೆ ಮನೆಗೆ ಹಿಂತಿರುಗಿದಳು. ಆಕೆ, ಆಕೆಗೆ ಲಕ್ಷ್ಮಣ ಪೂರಿಯಲ್ಲಿನ ಒಂದು ಉಪಹಾರ ಗೃಹಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಅದರ ನಂತರ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು, ‘ಆ ಸಮಯದಲ್ಲಿ ಪೊಲೀಸರು ದೂರು ಹಿಂಪಡೆಯಲು ಒತ್ತಡ ಹೇರುತ್ತಿದ್ದರು’, ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಇದು ಉತ್ತರ ಪ್ರದೇಶ ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! ಇಂತಹ ಪೊಲೀಸರ ಮೇಲೆ ಕೊಲೆ ಆರೋಪ ದಾಖಲಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಯೋಗಿ ಆದಿತ್ಯನಾಥ ಇವರ ಸರಕಾರ ಪ್ರಯತ್ನಿಸಬೇಕೆಂದು ಜನರಿಗೆ ಅನಿಸುತ್ತದೆ !