ನವದೆಹಲಿ – ಚೀನಾ ಸಾಗರದಲ್ಲಿ ಬಂದಿರುವ ‘ನೋರು’ ಚಂಡಮಾರುತದಿಂದಾಗಿ ಬಂಗಾಳದ ಉಪಸಾಗರದಲ್ಲಿ ಕಡಿಮೆ ಒತ್ತಡದ ಕ್ಷೇತ್ರ ನಿರ್ಮಾಣವಾಗಿದೆ. ಇದರಿಂದಾಗಿ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಆರ್ದ್ರತೆಯು ಹೆಚ್ಚಾಗಿದ್ದರಿಂದ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಮಳೆಯು ಅಕ್ಟೋಬರ್‌ನ ಮಧ್ಯದ ವರೆಗೂ ಇರುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆಯು ತಿಳಿಸಿದೆ. ಹಾಗೆಯೇ ಹವಾಮಾನ ಇಲಾಖೆಯು ದೇಶದಲ್ಲಿನ ೨೦ ರಾಜ್ಯಗಳಲ್ಲಿ ಮಳೆಯ ‘ಯೆಲ್ಲೋ ಅಲರ್ಟ’ ಜ್ಯಾರಿಗೊಳಿಸಿದೆ. ಅಂದರೆ ಗುಡುಗು ಸಹಿತ ಕಡಿಮೆಯಿಂದ ಮಧ್ಯಮ ಮಳೆ ಬೀಳುವ ಸಾಧ್ಯತೆಯಿದೆ. ಇದರಲ್ಲಿ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಝಾರ್ಖಂಡ, ಬಂಗಾಳ, ಸಿಕ್ಕಿಮ್, ಆಸಾಮ, ಮೇಘಾಲಯ, ನಾಗಾಲ್ಯಾಂಡ, ಮಣೀಪುರ, ಮೊಝೋರಾಮ, ತ್ರಿಪುರಾ, ಓಡಿಶಾ, ಛತ್ತೀಸಗಡ, ಮಹಾರಾಷ್ಟ್ರ, ತೆಲಂಗಾಣಾ, ಆಂಧ್ರಪ್ರದೇಶ, ಪುದುಚೆರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳೂ ಸೇರಿವೆ.