ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಶಮಿ ಇವರು ದಸರಾ ಹಬ್ಬದ ಶುಭಾಶಯಗಳು ನೀಡಿದ್ದರಿಂದ ಅವರ ಧರ್ಮ ಬಾಂಧವರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಕ್ರಿಕೆಟ್ ಆಟಗಾರ ಮಹಮ್ಮದ್ ಶಮಿ

ನವದೆಹಲಿ – ಭಾರತದ ವೇಗದ ಬೌಲರ್ ಮಹಮ್ಮದ್ ಶಮಿ ಟ್ವಿಟ್ ಮೂಲಕ ಹಿಂದೂಗಳಿಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಧರ್ಮ ಬಾಂಧವರು ಅವರನ್ನು ಟೀಕಿಸಿದ್ದಾರೆ ಹಾಗೂ ಅವರಿಗೆ ಅವರ ಹೆಸರು ಬದಲಾಯಿಸುವ ಸಲಹೆ ಕೂಡ ನೀಡಿದ್ದಾರೆ.


ಇನ್ನೊಂದು ಕಡೆ ಅವರ ಟ್ವೀಟಿನ್ನು ೪೦ ಸಾವಿರ ಜನರು ಬೆಂಬಲಿಸಿದ್ದಾರೆ. ಶಮಿ ಇವರು ಅವರ ಟ್ವೀಟಿನಲ್ಲಿ ಪ್ರಭು ಶ್ರೀ ರಾಮನ ಚಿತ್ರ ಕೂಡ ಪೋಸ್ಟ್ ಮಾಡಿದ್ದರು.
ದಸರಾದ ಈ ಪವಿತ್ರ ಹಬ್ಬದಂದು ಪ್ರತಿಯೊಬ್ಬರ ಆಯುಷ್ಯದಲ್ಲಿ ಸುಖ, ಸಮೃದ್ಧಿ ಮತ್ತು ಯಶಸ್ಸು ಲಭಿಸಲಿ, ಇದೇ ನಾನು ಭಗವಂತ ಶ್ರೀ ರಾಮನಲ್ಲಿಗೆ ಪ್ರಾರ್ಥನೆ ಮಾಡುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದಸರಾ ಹಬ್ಬದ ಶುಭಾಶಯಗಳು’, ಎಂದು ಶಮಿ ಇವರು ಟ್ವೀಟ್ ಮಾಡಿದ್ದರು.

ಸಂಪಾದಕೀಯ ನಿಲುವು

ಈಗ ಜಾತ್ಯತೀತರು ಏಕೆ ಮಾತನಾಡುತ್ತಿಲ್ಲ ?