ದುರ್ಗ (ಛತ್ತೀಸ್‌ಗಡ) – ಇಲ್ಲಿಯ ಮೂರು ಸಾಧುಗಳನ್ನು ಥಳಿಸಿರುವ ಆಘಾತಕಾರಿ ವಿಡಿಯೋ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರು ಎಂದು ಸುಳ್ಳು ವದಂತಿ ಹಬ್ಬಿಸಿದ ನಂತರ ಗುಂಪಿನಿಂದ ಸಾಧುಗಳನ್ನು ಥಳಿಸಿರುವ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ದೂರು ದಾಖಲಿಸಲಾಗಿದೆ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ ಅಧಿಕಾರಿ ಅಭಿಷೇಕ ಪಲ್ಲವ ಇವರು ಹೇಳಿದರು. ಪಲ್ಲವ ಇವರು ನೀಡಿರುವ ಮಾಹಿತಿ ಪ್ರಕಾರ ಈ ಸಂಪೂರ್ಣ ಘಟನೆ ದುರ್ಗದ ಭಿಲಾಯಿ-೩ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
೧. ಕೆಲವು ಕಾರಣಗಳಿಂದ ಮೂರು ಸಾಧುಗಳು ದಾರಿ ತಪ್ಪಿ ಭಿಲಾಯಿ-೩ ರ ವಸತಿಯಲ್ಲಿ ತಲುಪಿದರು.
೨. ಸ್ಥಳೀಯ ಜನರು ಅವರನ್ನು ನಿಲ್ಲಿಸಿ ಅವರ ವಿಚಾರಣೆ ನಡೆಸಿದರು; ಆದರೆ ವಿಚಾರಣೆ ಮಾಡುವಾಗ ಜನರು ಮೂವರು ಸಾಧುಗಳನ್ನು ಹಿಗ್ಗ ಮುಗ್ಗ ಥಳಿಸಿದರು.
೩. ಜನರು ಸುಳ್ಳು ಸುದ್ದಿಗಳ ಮೇಲೆ ವಿಶ್ವಾಸ ಇಡಬಾರದು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಬಾರದೆಂದು ಪೊಲೀಸ ಅಧಿಕಾರಿ ಕರೆ ನೀಡಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಸಾಧುಗಳ ಮೇಲಿನ ದಾಳಿಯ ಘಟನೆಗಳು ಹೆಚ್ಚುತ್ತಿರುವುದರಿಂದ ಇದರ ಹಿಂದೆ ಷಡ್ಯಂತ್ರ ಇಲ್ಲವೇ ಎಂಬುದರ ತನಿಖೆ ಮಾಡುವುದು ಅವಶ್ಯಕವಾಗಿದೆ ! |