ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ಮುಸಲ್ಮಾನನಿಗೆ ತನ್ನ ದೇಶದ ಮೂಲಕ ಹಾದುಹೋಗಲು ನಿರಾಕರಿಸಿದ ಪಾಕಿಸ್ತಾನ !

ಪ್ರಪಂಚದಾದ್ಯಂತ ಇಸ್ಲಾಮಿನ ಹೆಸರಿನಲ್ಲಿ ಡಂಗೂರ ಸಾರುವ ದೇಶ ಇಂತಹ ಸಂದರ್ಭದಲ್ಲಿ ಅಡಚಣೆ ಒಡ್ಡುತ್ತಿದೆ ! – ಪಂಜಾಬ್‌ನ ಶಾಹಿ ಇಮಾಮ್

ಪಂಜಾಬ್‌ನ ಶಾಹಿ ಇಮಾಮ್ ಮೌಲಾನಾ ಮುಹಮ್ಮದ್ ಉಸ್ಮಾನ್ ರಹಮಾನಿ ಲುಧಿಯಾನ್ವಿ

ಲುಧಿಯಾನಾ (ಪಂಜಾಬ್) – ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ. ಪಾಕಿಸ್ತಾನವು ಶಿಹಾಬ್‌ಗೆ ವೀಸಾ ನಿರಾಕರಿಸಿದೆ. ಈ ಮಾಹಿತಿಯನ್ನು ಪಂಜಾಬ್‌ನ ಶಾಹಿ ಇಮಾಮ್ ಮೌಲಾನಾ ಮುಹಮ್ಮದ್ ಉಸ್ಮಾನ್ ರಹಮಾನಿ ಲುಧಿಯಾನ್ವಿ ಅವರು ‘ಮಜಲಿಸ್ ಅಹರಾರ್ ಇಸ್ಲಾಂ’ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೀಡಿದ್ದಾರೆ. ಸದ್ಯ ಶಿಹಾಬ್ ಚಿತ್ತೂರು ಪಂಜಾಬ್ ತನಕ ತಲುಪಿದ್ದಾರೆ.

ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ಶಿಹಾಬ್‌ಗೆ ಪಾಕಿಸ್ತಾನದ ಗಡಿಯನ್ನು ತಲುಪಿದ ನಂತರ ಪಾಕಿಸ್ತಾನದ ವೀಸಾವನ್ನು ನೀಡಲಾಗುವುದು ಎಂದು ಆರಂಭದಲ್ಲಿ ಭರವಸೆ ನೀಡಿತ್ತು; ಏಕೆಂದರೆ ಮೊದಲೇ ಕೊಟ್ಟರೆ ಅವಧಿ ಮುಗಿಯುವುದು; ಆದರೆ ಇದೀಗ ಶಿಹಾಬ್ ಪಂಜಾಬ್ ಪಕ್ಕದಲ್ಲಿರುವ ಪಾಕಿಸ್ತಾನದ ಗಡಿಗೆ ತಲುಪಿದಾಗ ಪಾಕಿಸ್ತಾನವು ಆತನಿಗೆ ವೀಸಾ ನೀಡಲು ನಿರಾಕರಿಸಿದೆ.

ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ! – ಮೌಲಾನಾ ಮಹಮ್ಮದ್ ಉಸ್ಮಾನ್ ರಹಮಾನಿ ಲೂಧಿಯಾನವಿ

ಮೌಲಾನಾ ಮಹಮ್ಮದ ಉಸ್ಮಾನ ಇವರು, ಪಾಕಿಸ್ತಾನದ ಅಧಿಕಾರಿಗಳ ವರ್ತನೆ ಅಚ್ಚರಿ ತಂದಿದೆ ಎಂದು ಹೇಳಿದರು. ದ್ರೋಹ ಮಾಡುವುದು ಪಾಕಿಸ್ತಾನದ ಹಳೆಯ ಅಭ್ಯಾಸವಾಘಿದೆ. ಭಾರತದ ಮುಸಲ್ಮಾನರು ಪಾಕಿಸ್ತಾನ ಸರಕಾರದಿಂದ ಎಂದಿಗೂ ಏನನ್ನೂ ನಿರೀಕ್ಷಿಸಿಲ್ಲ. ೭೫ ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತೀಯ ಮುಮುಸಲ್ಮಾನನು ಕಾಲ್ನಡಿಗೆಯಲ್ಲಿ ಮೆಕ್ಕಾಗೆ ಹೋಗುತ್ತಿರುವಾಗ, ಪಾಕಿಸ್ತಾನವು ತನ್ನ ಭೂಮಿಯ ಮೂಲಕ ಹಾದುಹೋಗಲು ನಿರಾಕರಿಸಿತು. ಪಾಕಿಸ್ತಾನ ಸರಕಾರಕ್ಕೆ ನಾಚಿಕೆಯಾಗಬೇಕು. ಜಗತ್ತಿನಾದ್ಯಂತ ಇಸ್ಲಾಂನ ಹೆಸರಿನಲ್ಲಿ ಡಂಗೂರ ಸಾರುವ ದೇಶವು ಇಂತಹ ಸಂದರ್ಭದಲ್ಲಿ ಅಡಚಣೆ ಒಡ್ಡುತ್ತಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನೆರವು ನೀಡುವಂತೆ ಮನವಿ ಮಾಡಲಾಗಿದೆ. ಇದರಿಂದ ಪಾಕಿಸ್ತಾನದ ದ್ವಿಮುಖತನವು ಇಡೀ ಇಸ್ಲಾಮಿಕ್ ರಾಷ್ಟ್ರಗಳ ಎದುರು ಬಯಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಪಾಕಿಸ್ತಾನಪ್ರೇಮಿ ಮುಸಲ್ಮಾನರು ಈಗ ಏಕೆ ಮೌನರಾಗಿದ್ದಾರೆ ?