ಗುಜರಾತಿನಲ್ಲಿ ಅರವಿಂದ ಕೇಜ್ರಿವಾಲ್ ಇವರ ಮೇಲೆ ಬಾಟಲ್ ಎಸೆತ !

ರಾಜಕೋಟ (ಗುಜರಾತ) – ಇಲ್ಲಿಯ ಖೋಡಲಧಾಮದಲ್ಲಿ ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿ ಆಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಮೇಲೆ ದುಷ್ಕರ್ಮಿಗಳು ಹಿಂದಿನಿಂದ ಪ್ಲಾಸ್ಟಿಕ್ ನ ಬಾಟಲಿ ಎಸೆದಿದ್ದಾರೆ; ಆದರೆ ಅದು ಅವರಿಗೆ ತಗಲದೆ ಸ್ವಲ್ಪ ದೂರದ ಅಂತರದಲ್ಲಿ ಬಿದ್ದಿದೆ. ಬಾಟಲಿ ಎಸೆಯುವವನ ಗುರುತು ಸಿಗಲು ಸಾಧ್ಯವಾಗಿಲ್ಲ.