ಯುರೋಪಿನ ಒಕ್ಕೂಟದ ೨೭ ದೇಶಗಳ ಪೈಕಿ ೧೩ ದೇಶಗಳಲ್ಲಿ ನಿರಾಶ್ರಿತರಿಗೆ ಪ್ರವೇಶ ನಿಷೇಧ

ನಿರಾಶ್ರಿತರಲ್ಲಿ ಬಹುಪಾಲು ಮುಸಲ್ಮಾನರು ಸೇರಿದ್ದಾರೆ

ನವ ದೆಹಲಿ – ಯುರೋಪ್ ಖಂಡದಲ್ಲಿನ ಐರೋಪ್ಯ ಒಕ್ಕೂಟದ ೨೭ ದೇಶಗಳ ಪೈಕಿ ೧೩ ದೇಶಗಳು ನಿರಾಶ್ರಿತರಿಗೆ ತಮ್ಮ ದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿವೆ. ಈ ನಿರಾಶ್ರಿತರಲ್ಲಿ ಮುಸಲ್ಮಾನ ದೇಶಗಳಿಂದ ಬಂದಿರುವ ಮುಸಲ್ಮಾನರ ಸಂಖ್ಯೆಯೇ ಹೆಚ್ಚು ಇದೆ. ಕಳೆದ ಕೆಲವು ವರ್ಷಗಳಿಂದ ಈ ಮುಸಲ್ಮಾನರು ಯುರೋಪಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕದಡಿದ ಕಾರಣ ಯುರೋಪಿನ ಜನರಲ್ಲಿ ಕೋಪವಿದೆ. ಅದರಲ್ಲೂ ಈ ೧೩ ದೇಶಗಳಲ್ಲಿ ಇದೀಗ ರಾಷ್ಟ್ರೀಯವಾದಿ ಪಕ್ಷಗಳ ಸರಕಾರಗಳು ಅಧಿಕಾರಕ್ಕೆ ಬಂದಿರುವ ಕಾರಣ ಈ ನಿಷೇಧವನ್ನು ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರವಾದಿ ಪಕ್ಷಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ನೋಡಿದರೆ ಇತರ ದೇಶಗಳಲ್ಲಿಯೂ ರಾಷ್ಟ್ರೀಯವಾದಿ ಪಕ್ಷಗಳಿಗೆ ಹೆಚ್ಚಿನ ಬೆಂಬಲ ಸಿಗಬಹುದು ಎಂಬ ಅನುಮಾನವನ್ನು ಯುರೋಪಿಯನ್ ಯೂನಿಯನ್ ನ ವರದಿಯಲ್ಲಿ ವ್ಯಕ್ತ ಪಡಿಸಲಾಗಿದೆ. ಈ ದೇಶಗಳಲ್ಲಿಯೂ ರಾಷ್ಟ್ರೀಯವಾದಿ ಸರಕಾರಗಳು ಅಧಿಕಾರಕ್ಕೆ ಬರಬಹುದು.

ಮುಸಲ್ಮಾನ ನಿರಾಶ್ರಿತರಿಂದಾಗಿ ಅಪರಾಧಗಳಲ್ಲಿ ಹೆಚ್ಚಳ !

ಯುರೋಪಿನ ಒಕ್ಕೂಟದ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಬರುವ ನಿರಾಶ್ರಿತ ಮುಸಲ್ಮಾನರಿಂದಾಗಿ ಅಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತುಲನಾತ್ಮಕವಾಗಿ, ಸ್ವೀಡನ್‌ನಲ್ಲಿ ಅಪರಾಧವು ೫ ವರ್ಷಗಳಲ್ಲಿ ಶೇ. ೬೦ ರಷ್ಟು ಹೆಚ್ಚಾಗಿದೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಮುಸಲ್ಮಾನ ವಲಸಿಗರ ವಾಸವಿರುವ ಕಾರಣ ಧಾರ್ಮಿಕ ಮತ್ತು ಸಾಮಾಜಿಕ ಸಮತೋಲನವು ಕೆಟ್ಟಿತು. ಫ್ರಾಂಸ್ ನ ಹಲವು ನಗರಗಳಲ್ಲಿ ಸಾಮಾಜಿಕ ಸಾಮರಸ್ಯವು ಹದಗೆಟ್ಟಿದೆ.

ಸಂಪಾದಕೀಯ ನಿಲುವು

ಅಪರಾಧಿ ಪ್ರವೃತ್ತಿಯ ಮುಸಲ್ಮಾನರಿಂದಾಗಿ ಏನನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಯುರೋಪಿಯನ್ ರಾಷ್ಟ್ರಗಳು ಈಗ ಅರಿತುಕೊಂಡಿರುವುದರಿಂದ, ಅವರು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಇದೇ ಐರೋಪ್ಯ ರಾಷ್ಟ್ರಗಳು ಭಾರತಕ್ಕೆ ಜಾತ್ಯತೀತತೆಯ ಉಪದೇಶ ಮಾಡುತ್ತಾ ಇಂತಹ ಮುಸಲ್ಮಾನರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ಸಲಹೆ ನೀಡುತ್ತವೆ ! ಕಾಶ್ಮೀರದಲ್ಲಿ ಮುಸಲ್ಮಾನರು ಹಿಂದುಗಳ ವಿರುದ್ಧ ನಡೆಸಿದ ದೌರ್ಜನ್ಯದ ಬಗ್ಗೆ ಮಾತ್ರ ಈ ದೇಶಗಳು ಯಾವಾಗಲೂ ಮೌನವಾಗಿಯೇ ಇದ್ದಿವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !