ತಾಜ್ ಮಹಲ್ ಅನ್ನು ಶಾಹಜಹಾನ್ ನಿರ್ಮಿಸಿದ್ದ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ಎಡದಿಂದ) ಡಾ. ರಜನೀಶ್ ಸಿಂಗ್ ಮತ್ತು ಎಡದಿಂದ ತಾಜ್ ಮಹಲ್

ನವ ದೆಹಲಿ – ತಾಜ್ ಮಹಲ್ ಇತಿಹಾಸವನ್ನು ತಿಳಿಯಲು ಡಾ. ರಜನೀಶ್ ಸಿಂಗ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ‘ಶಾಹಜಹಾನನು ತಾಜ್ ಮಹಲ್ ನಿರ್ಮಿಸಿದ್ದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿರುವ ಬಗ್ಗೆ ಸತ್ಯ ಮಾಹಿತಿ ಪಡೆಯಲು ‘ಸತ್ಯಶೋಧನಾ ಸಮಿತಿ’ಯನ್ನು ರಚಿಸಬೇಕು’, ಎಂದು ಅವರು ಅರ್ಜಿಯಲ್ಲಿ ಬೇಡಿಕೆಯನ್ನಿಟ್ಟಿದ್ದಾರೆ. ತಾಜ್ ಮಹಲ್ ಬಗ್ಗೆ ಇತಿಹಾಸದಲ್ಲಿ ಹಲವು ಸಂಗತಿಗಳ ವಿವರಗಳಿವೆ; ಆದರೆ ಅವುಗಳನ್ನು ಸಾಬೀತುಪಡಿಸಲು ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಡಾ. ರಜನೀಶ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಡಾ. ರಾಜಶಿಶ್ ಸಿಂಗ್ ಅವರು ತಾಜ್‌ಮಹಲ್‌ನ ನೆಲಮಾಳಿಗೆಯ ಕೊಠಡಿಗಳನ್ನು ತೆರೆಯಲು ಮತ್ತು ವಾಸ್ತವ ಹಾಗೂ ಸತ್ಯಾಂಶಗಳನ್ನು ಕಂಡುಹಿಡಿಯಲು ಒತ್ತಾಯಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು; ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಲಾಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಡಾ. ರಜನೀಶ್ ಸಿಂಗ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದಾರೆ.