ಬಾಲೋದ (ಛತ್ತಿಸ್‌ಗಡ) ಇಲ್ಲಿ ಸಾಧುಗಳ ವೇಷ ಧರಿಸಿ ಮಕ್ಕಳ ಕಳ್ಳತನದ ಪ್ರಯತ್ನದಲ್ಲಿದ್ದ ೨ ಮುಸಲ್ಮಾನರ ಬಂಧನ

ಬಾಲೊದ (ಛತ್ತಿಸ್‌ಗಡ) – ಇಲ್ಲಿಯ ಗುರುರ ಗ್ರಾಮದಲ್ಲಿ ಕೇಸರಿ ವಸ್ತ್ರ ಧರಿಸಿದ್ದ ಇಬ್ಬರೂ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಮುಸಾಫೀರ್ ಜೋಗಿ ಮತ್ತು ಯಾದ ಅಲಿ ಎಂದು ಅವರ ಹೆಸರುಗಳಾಗಿವೆ. ಅವರ ಅನುಮಾನಾಸ್ಪದ ವರ್ತನೆಯಿಂದ ಜನರು ಅವರ ವಿಚಾರಣೆ ನಡೆಸಿದ್ದಾರೆ. ಆ ಸಮಯದಲ್ಲಿ ಪೊಲೀಸರನ್ನು ಕರೆಸಿದ ನಂತರ ಪೊಲೀಸರು ಇಬ್ಬರನ್ನು ಪೊಲೀಸ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರ ವಿಚಾರಣೆ ನಡೆಸಿದ ನಂತರ ನಾವು ಹಿಂದೂಗಳೆಂದು ಹೇಳಿದ್ದಾರೆ. ಪೊಲೀಸರು ಅವರಿಗೆ ಗಾಯಿತ್ರಿ ಮತ್ತು ಮಹಾಮೃತ್ಯುಂಜಯ ಮಂತ್ರ ಹೇಳಲು ಹೇಳಿದ ಮೇಲೆ ಅವರಿಗೆ ಮಂತ್ರ ಹೇಳಲು ಸಾಧ್ಯವಾಗಿಲ್ಲ. ಅದರ ನಂತರ ಅವರು ಮುಸಲ್ಮಾನರಾಗಿರುವುದು ಒಪ್ಪಿಕೊಂಡರು ಹಾಗೂ ಮಕ್ಕಳನ್ನು ಕಳವು ಮಾಡುವುದಕ್ಕಾಗಿ ತಿರುಗುತ್ತಿದ್ದರು ಎಂದು ಒಪ್ಪಿಕೊಂಡರು. ಸಾಧುಗಳ ವೇಷ ಧರಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸಹ ಹೇಳಿದರು. ಅವರಿಬ್ಬರೂ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ನವಾದಾ ಗ್ರಾಮದ ನಿವಾಸಿಗಳಾಗಿದ್ದಾರೆ.

ಸಂಪಾದಕೀಯ ನಿಲುವು

ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !