ಈಗ ‘ಗೂಗಲ್‌’ನಿಂದ ಸಂಸ್ಕೃತದ ಅನುವಾದ ಮಾಡಲು ಸಾಧ್ಯವಿದೆ !

ಗೂಗಲ ಹಾಗೂ ‘ಇಂಡಿಯನ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್ಸ್‌’ರ ನಡುವೆ ಯೋಗ್ಯ ಒಪ್ಪಂದ !

ನವದೆಹಲಿ – ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ‘ಇಂಡಿಯನ್‌ ಕೌನ್ಸಿಲ್‌ ಫಾರ ಕಲ್ಚರಲ್‌ ರಿಲೇಶನ್ಸ್‌’ (‘ಐ.ಸಿ.ಸಿ.ಆರ್‌.’) ‘ಗೂಗಲ್‌’ಎಂಬ ‘ಸರ್ಚ ಇಂಜಿನ’ ಆಗಿರುವ ಸಂಕೇತಸ್ಥಳದ ಸಂಸ್ಥೆಯೊಂದಿಗೆ ಅನ್ಯೋನ್ಯತೆಯ ಒಪ್ಪಂದವನ್ನು ಮಾಡಿದೆ. ಸಂಸ್ಕೃತ ಭಾಷೆಯಲ್ಲಿನ ಸಾಹಿತ್ಯವನ್ನು ಇತರ ಅನೇಕ ಭಾಷೆಗಳಲ್ಲಿ ಅನುವಾದ ಮಾಡಲು ತಂತ್ರಜ್ಞಾನದ ಸಹಾಯದಿಂದ ಕೃತಕ ಬುದ್ಧಿವಂತಿಕೆ (ಆರ್ಟಿಫಿಶಲ ಇಂಟೆಲಿಜನ್ಸ್‌) ಮತ್ತು ‘ಮಶೀನ ಲರ್ನಿಂಗ್‌’ಗಳನ್ನು ಬಳಸಲಾಗುವುದು. ‘ಮಶೀನ ಲರ್ನಿಂಗ್‌’ ಇದು ಸಂಗಣಕಕ್ಕೆ ಕಲಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ, ಒಟ್ಟಿನಲ್ಲಿ ಸಂಗಣಕಕ್ಕೆ ಯಾವುದೇ ಸೂಚನೆಯನ್ನು ನೀಡದೇ ಸ್ವತಃ ಕೆಲಸ ಮಾಡಲು ಕಲಿಸುವುದಾಗಿದೆ.


ಇದರ ಅನ್ವಯ ಸಂಸ್ಕೃತದಲ್ಲಿನ ಸಾಮಾನ್ಯವಾಗಿ ಬಳಸಲಾಗುವ ೧ ಲಕ್ಷ ಸಾಲುಗಳ ಆಂಗ್ಲ ಮತ್ತು ಹಿಂದೂ ಅನುವಾದವನ್ನು ಗೂಗಲ್‌ನಲ್ಲಿ ದೊರಕಿಸಿಕೊಡಲಾಗುವುದು. ಇದಕ್ಕಾಗಿ ಪ್ರಾಧ್ಯಾಪಕರಾದ ಅಮರಜೀವ ಲೋಚನರವರ ನೇತೃತ್ವದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿನ ಸಂಸ್ಕೃತ ವಿಭಾಗದ ವಿದ್ಯಾರ್ಥಿ ಹಾಗೂ ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ.