ಪಿ.ಎಫ್.ಐ. ಮೇಲಿನ ನಿಷೇಧವನ್ನು ಬೆಂಬಲಿಸಿದ ಮೌಲಾನಾರವರಿಗೆ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ

ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ! – ಮೌಲಾನ ಸ್ಪಷ್ಟನೆ

(ಮೌಲಾನಾ ಎಂದರೆ ಇಸ್ಲಾಮ್‌ನ ವಿದ್ವಾಂಸ)

ಬರೇಲಿ (ಉತ್ತರ ಪ್ರದೇಶ) – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಸಂಘಟನೆಯ ಮೇಲಿನ ನಿಷೇಧವನ್ನು ಬೆಂಬಲಿಸಿದ ಮೌಲಾನಾ ಶಹಾಬುದ್ದೀನ್ ರಿಜ಼್ವಿಯವರ ನಾಲಿಗೆ ಕತ್ತರಿಸುವಂತೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ. ಬೆದರಿಕೆ ನೀಡುವವನು ತನ್ನ ಹೆಸರು ಅಬ್ದುಲ್ ಸಮದ್ ಎಂದು ಹೇಳಿದನು. ಆತನು ದೆಹಲಿಯಲ್ಲಿನ ಶಾಹೀನ್ ಬಾಗ್‌ನ ನಿವಾಸಿಯಾಗಿದ್ದಾನೆ. ಮೌಲಾನಾ ರಿಜ಼್ವಿ ಅವರು ಟ್ವೀಟ್ ನ ಮೂಲಕ ಈ ಮಾಹಿತಿಯನ್ನು ನೀಡಿದ ಬಳಿಕ ಪೋಲೀಸರು ತನಿಖೆಯನ್ನು ಪ್ರಾರಂಭಿಸಿದರು. ಮೌಲಾನಾ ರಿಜ಼್ವಿ ಅವರು ‘ಆಲ್ ಇಂಡಿಯಾ ಮುಸ್ಲಿಮ್ ಜಮಾತ್’ ನ ಅಧ್ಯಕ್ಷರಾಗಿದ್ದಾರೆ. ಈ ಬೆದರಿಕೆಯ ನಂತರ ಅವರು ಒಂದು ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು, “ನಾನು ಸುಮ್ಮನೆ ಕೂರುವವರ ಪೈಕಿ ಅಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ.” ಎಂದು ಹೇಳಿದ್ದಾರೆ.

ಮೌಲಾನಾ ಶಹಾಬುದ್ದೀನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಕನ್ಹೈಯಾಲಾಲ್‌ನ ಹತ್ಯೆಯನ್ನು ಖಂಡಿಸಿದ ನಂತರವೂ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಆಗಲೂ ನನಗೆ ಬೆದರಿಕೆಗಳು ಬಂದಿದ್ದವು. ಆ ಸಮಯದಲ್ಲಿ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೆ; ಆದರೆ ಪೊಲೀಸರು ನನಗೆ ರಕ್ಷಣೆ ನೀಡಲಿಲ್ಲ. ಎಂದು ಮೌಲಾನಾ ರಿಜ಼್ವಿ ಹೇಳಿದರು.