ಈಗ ಶ್ರೀ ದುರ್ಗಾದೇವಿಯ ಪೂಜೆ ಮಾಡಿರುವುದರಿಂದ ಭಾಜಪದ ನಾಯಕಿ ರೂಬಿ ಖಾನ್ ಇವರಿಗೆ ಮುಸಲ್ಮಾನರಿಂದ ಕೊಲೆ ಬೆದರಿಕೆ !

ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿ ಸ್ಥಾಪಿಸಿದರೆಂದು ಬೆದರಿಕೆ ನೀಡಲಾಗಿತ್ತು !

ಶ್ರೀ ದುರ್ಗಾದೇವಿಯ ಪೂಜೆ ಮಾಡುತ್ತಿರುವ ಭಾಜಪದ ನಾಯಕಿ ರೂಬಿ ಖಾನ್

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಭಾಜಪದ ನಾಯಕಿ ರೂಬಿ ಖಾನರು ಈಗ ನವರಾತ್ರಿಯಲ್ಲಿ ಶ್ರೀ ದುರ್ಗಾದೇವಿಯ ಪೂಜೆ ಮಾಡಿರುವುದರಿಂದ ಮುಸಲ್ಮಾನರಿಂದ ಕೊಲ್ಲುವ ಬೆದರಿಕೆ ನೀಡಲಾಗುತ್ತೆ. ಈ ಮೊದಲು ಗಣೇಶೋತ್ಸವದಲ್ಲಿ ಅವರು ಅವರ ಮನೆಯಲ್ಲಿ ಶ್ರೀ ಗಣೇಶನನ್ನು ಸ್ಥಾಪಿಸಿದುದರಿಂದ ಅವರಿಗೆ ಇದೇ ರೀತಿ ಬೆದರಿಕೆ ನೀಡಲಾಗುತ್ತಿತ್ತು. ಅವರ ವಿರುದ್ಧ ಫತವಾ ಕೂಡ ತೆಗೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಅವರ ಮನೆಯಲ್ಲಿ ’ರಾಮ ದರಬಾರ ’ ದ ಆಯೋಜನೆ ಮಾಡಲಾಗಿತ್ತು. ಅದರ ನಂತರ ಅವರ ಮೇಲೆ ದಾಳಿ ಕೂಡ ನಡೆಸಲಾಗಿತ್ತು.

ಜೀವಂತವಾಗಿ ಸುಡುವುದಾಗಿ ಪ್ರಚೋದನಕಾರಿ ಕರೆ !

ರೂಬಿ ಖಾನ ಇವರ ವಿರುದ್ಧ ಅಲ್ಲಲ್ಲಿಯೇ ಕರಪತ್ರಗಳನ್ನು ಅಂಟಿಸಲಾಗಿ ಅದರ ಮೇಲೆ ’ಕಾಫಿರ ’ ಎಂದು ಬರೆಯಲಾಗಿತ್ತು. ಹಾಗೂ ಅವರನ್ನು ಮತ್ತು ಅವರ ಕುಟುಂಬದವರನ್ನು ಬಹಿಷ್ಕರಿಸಿ ಜೀವ ಸಹಿತ ಸುಟ್ಟು ಹಾಕಬೇಕೆಂದು ಕೂಡ ಈ ಕರ ಪತ್ರದಲ್ಲಿ ಬರೆಯಲಾಗಿತ್ತು. ಈ ವಿಷಯವಾಗಿ ಪೊಲೀಸರಿಗೆ ತಿಳಿಸಲಾಗಿದ್ದು ರೂಬಿ ಖಾನ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ರಕ್ಷಣೆ ನೀಡಲು ಬೇಡಿಕೆ ಸಲ್ಲಿಸಿದ್ದರು.
ಈ ವಿಷಯವಾಗಿ ರೂಬಿ ಖಾನ ಇವರ ಪತಿ ಆಸಿಫ್ ಖಾನ್ ಹೇಳಿದ್ದರು, ನಾವು ಹಿಂದೂ ಮುಸಲ್ಮಾನ ಏಕತೆಯ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ಕೆಲವು ಜನರು ನಮ್ಮ ಮಾನಹಾನಿ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಬೆದರಿಕೆಯ ವಿರುದ್ಧ ಒಬ್ಬನೇಒಬ್ಬ ಮುಸಲ್ಮಾನ ನಾಯಕ, ಮುಸಲ್ಮಾನ ಸಂಘಟನೆ ಅಥವಾ ಮುಸಲ್ಮಾನ ಬುದ್ಧಿವಾದಿಗಳು ಮುಂದೆ ಬಂದು ಮಾತನಾಡುವುದಿಲ್ಲ, ಅಥವಾ ಆಂದೋಲನ ಕೂಡ ನಡೆಸುವುದಿಲ್ಲ, ಇದನ್ನು ತಿಳಿದುಕೊಳ್ಳಿ!
  • ಯಾರಾದರೊಬ್ಬ ಮುಸಲ್ಮಾನನಿಂದ ಹಿಂದೂಗಳ ಧಾರ್ಮಿಕ ಕೃತಿ ಆಚರಿಸಿದರೆ, ಆಗ ಅವರನ್ನು ಮುಸಲ್ಮಾನರು ವಿರೋಧಿಸುತ್ತಾರೆ. ಹಾಗೂ ಹಿಂದೂವು ಮುಸಲ್ಮಾನರ ಧಾರ್ಮಿಕ ಕೃತಿ ಮಾಡಿದರೆ, ಆಗ ಅವನ ಪ್ರಶಂಸೆ ಮಾಡಲಾಗುತ್ತದೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ.
  • ಹಿಂದೂಗಳಿಗೆ ಸರ್ವಧರ್ಮ ಸಮಭಾವವನ್ನು ಮತ್ತು ಜಾತ್ಯಾತೀತತೆಯನ್ನು ಹಿಂದೂಗಳಿಗೆ ಉಣಬಯಸುವವರು ಈಗ ಏಕೆ ಮೌನವಾಗಿದ್ದಾರೆ ?