ಇಂದೋರ್ ನ ಗರಬಾ ಮಂಟಪದಲ್ಲಿ ನುಗ್ಗಿದ ೭ ಮುಸಲ್ಮಾನ ಯುವಕರ ಬಂಧನ

ಇಂದೋರ್ (ಮಧ್ಯಪ್ರದೇಶ) – ಬಜರಂಗದಳದ ಎಚ್ಚರಿಕೆಯ ನಂತರವೂ, ೭ ಮುಸಲ್ಮಾನ ಯುವಕರು ತಮ್ಮ ಗುರುತನ್ನು ಮರೆಮಾಚಿ ಇಂದೋರ್ ಗರಬಾ ಮಂಟಪಕ್ಕೆ ಪ್ರವೇಶಿಸಿದರು ಮತ್ತು ಹುಡುಗಿಯರ ಗರಬಾದ ವೀಡಿಯೊಗಳನ್ನು ಮಾಡಿದರು. ನಂತರ ವ್ಯವಸ್ಥಾಪಕರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದರು. ತನಿಖೆಯ ನಂತರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದರು. (ಹಿಂದೂ ಹುಡುಗಿಯರನ್ನು ’ಲವ್ ಜಿಹಾದ್’ನಲ್ಲಿ ಸಿಲುಕಿಸಲು ವಿವಿಧ ಹಂತಗಳಲ್ಲಿ ಹೋರಾಡುತ್ತಿರುವ ಮತಾಂಧರು!- ಸಂಪಾದಕರು)

ಈ ಕುರಿತು ಸಿಕ್ಕಿದ ಮಾಹಿತಿಯ ಪ್ರಕಾರ, ಏಳು ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆಮಾಚುವ ಮೂಲಕ ಪಂಢರಿನಾಥ ಚೌಕ್ ನ ಗರ್ಬಾ ಮಂಟಪವನ್ನು ಪ್ರವೇಶಿಸಿದರು. ಅವರು ಹುಡುಗಿಯರು ಗಾರ್ಬಾದ ವಿಡಿಯೋ ಹಾಗೂ ಚಿತ್ರಗಳನ್ನು ತೆಗೆಯುವ ವೀಡಿಯೊಗಳನ್ನು ತೆಗೆಯುತ್ತಿದ್ದರು. ಅವರ ಈ ಕೃತ್ಯವನ್ನು ನೋಡಿ ಅಲ್ಲಿದ್ದ ಬಜರಂಗದಳದ ಕಾರ್ಯಕರ್ತರಿಗೆ ಅವರ ಬಗ್ಗೆ ಅನುಮಾನ ಮೂಡಿತು. ನಂತರ ಅವರು ಅವರಿಗೆ ತಮ್ಮ ಹೆಸರು ಮತ್ತು ಗುರುತಿನ ಚೀಟಿಗಳನ್ನು ತೋರಿಸುವಂತೆ ಕೇಳಿದರು. ಎಲ್ಲಾ ಯುವಕರು ತಪ್ಪಾದ ಹೆಸರುಗಳನ್ನು ಹೇಳಿದರು ಮತ್ತು ಗುರುತಿನ ಚೀಟಿಗಳನ್ನು ಸಹ ತೋರಿಸಲು ಸಾಧ್ಯವಾಗಲಿಲ್ಲ. ನಂತರ ಯುವಕರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಯಿತು. ಇವರೆಲ್ಲರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.