‘ಪಿ.ಎಫ್‌.ಐ’ನ ನಂತರ ಅದರ ರಾಜಕೀಯ ಪಕ್ಷವಾದ ‘ಎಸ್‌.ಡಿ.ಪಿ.ಐ’ನ ಮೇಲೂ ಕಾರ್ಯಾಚರಣೆಯಾಗುವ ಸಾಧ್ಯತೆ !

ನವದೆಹಲಿ – ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಈ ಸಂಘಟನೆಯ ರಾಜಕೀಯ ಪಕ್ಷವಾದ ‘ಸೋಶಲ ಡೆಮಾಕ್ರೆಟಿಕ ಪಾರ್ಟಿ ಆಫ್‌ ಇಂಡಿಯಾ’ದ ಮೇಲೂ (‘ಎಸ್‌.ಡಿ.ಪಿ.ಐ’ನ ಮೇಲೂ) ಕಾರ್ಯಾಚರಣೆಯಾಗುವ ಸಾಧ್ಯತೆಯಿದೆ. ಈ ರಾಜಕೀಯ ಪಕ್ಷದ ನೋಂದಣಿಯಾಗಿದ್ದು ಅದಕ್ಕೆ ಚುನಾವಣಾ ಆಯೋಗದಿಂದ ಮಾನ್ಯತೆ ದೊರೆತಿದೆ. ಗೃಹಮಂತ್ರಾಲಯವು ಈ ಪಕ್ಷದ ಮೇಲೆ ಕಾರ್ಯಾಚರಣೆ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬಲ್ಲುದು, ಹಾಗೆಯೇ ಗೃಹಮಂತ್ರಾಲಯದ ಆಧಾರದಲ್ಲಿ ಚುನಾವಣಾ ಆಯೋಗವೂ ಈ ಪಕ್ಷದ ಮೇಲೆ ನಿರ್ಬಂಧವನ್ನು ಹೇರಬಹುದು. ‘ಎಸ್‌.ಡಿ.ಪಿ.ಐ.’ನ ಮೇಲೆ ಮೊದಲಿನಿಂದಲೂ ಚುನಾವಣಾ ಆಯೋಗದ ಗಮನವಿದೆ. ಪಕ್ಷದ ದೇಣಿಗೆಗಳಿಗೆ ಸಂಬಂಧಿಸಿದ ಮಾಹಿತಿಯ ಮೇಲೆ ಆಯೋಗವು ಪಕ್ಷವನ್ನು ಸತತವಾಗಿ ಪ್ರಶ್ನಿಸಿದೆ.

‘ಎಸ್‌.ಡಿ.ಪಿ.ಐ.’ ೨೦೧೮-೧೯ ಹಾಗೂ ೨೦೧೯-೨೦ ಈ ವರ್ಷಗಳಲ್ಲಿ ದೊರೆತ ದೇಣಿಗೆಗಳ ಬಗ್ಗೆ ಮಾಹಿತಿ ನೀಡಿಲ್ಲ. ೨೦೨೨-೨೧ರಲ್ಲಿ ಪಕ್ಷಕ್ಕೆ ೨ ಕೋಟಿ ೯೦ ಲಕ್ಷದಷ್ಟು ದೇಣಿಗೆ ದೊರೆತಿತ್ತು. ಆದರೆ ಪಕ್ಷದ ಪದಾಧಿಕಾರಿಗಳಿಗೆ ಕೇವಲ ೨೨ ಲಕ್ಷ ರೂಪಾಯಿಗಳ ಮಾಹಿತಿ ನೀಡಲು ಸಾಧ್ಯವಾಯಿತು. ‘ದೇಣಿಗೆ ನೀಡಿದವರು ಯಾರು ?’ ಎಂಬುದನ್ನೂ ಪಕ್ಷವು ಘೋಷಿಸಿಲ್ಲ, ಹಾಗೆಯೇ ಕಳೆದ ೩ ವರ್ಷಗಳಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ೧೧ ಕೋಟಿ ೭೮ ಲಕ್ಷ ರೂಪಾಯಿಗಳನ್ನು ಜಮೆ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ಈ ಪಕ್ಷದ ಮೇಲೆ ಕಾರ್ಯಾಚರಣೆ ಮಾಡಬಹುದು.