ಭಾಗ್ಯನಗರದಲ್ಲಿ (ಹೈದರಾಬಾದ್) ಮಂಟಪದಲ್ಲಿ ನುಗ್ಗಿ ಶ್ರೀ ದುರ್ಗಾದೇವಿಯ ವಿಗ್ರಹದ ಧ್ವಂಸ : ೨ ಮುಸಲ್ಮಾನ ಮಹಿಳೆಯರ ಬಂಧನ

ಭಾಗ್ಯನಗರ – ತೆಲಂಗಾಣ ರಾಜ್ಯದ ಭಾಗ್ಯನಗರದ ಪಟ್ಟಣದಲ್ಲಿ ದುರ್ಗಾ ಪೂಜೆಯ ಮಂಟಪಕ್ಕೆ ನುಗ್ಗಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮುಸಲ್ಮಾನ ಮಹಿಳೆಯರನ್ನು ಬಂಧಿಸಲಾಗಿದೆ. ಭಾಗ್ಯನಗರದ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ರಾಜೇಶ್ ಇವರು ನೀಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ ೨೭, ೨೦೨೨ ರಂದು ಬೆಳಿಗ್ಗೆ ಇಬ್ಬರು ಮುಸಲ್ಮಾನ ಮಹಿಳೆಯರು ಖೈರತಾಬಾದ್‌ನ ಒಂದು ದುರ್ಗಾ ಪೂಜೆಯ ಮಂಟಪಕ್ಕೆ ನುಗ್ಗಿ ದುರ್ಗಾ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ಮಹಿಳೆಯರನ್ನು ತಡೆಯಲು ಬಂದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳೀಯರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಯುತ್ತಿದ್ದಾರೆ. ದುರ್ಗಾ ಪೂಜೆಯ ಮಂಟಪದಲ್ಲಿ ಆದ ಧ್ವಂಸದ ನಂತರ ಹಿಂದೂಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳು ನಡೆಯಲು ಭಾಗ್ಯನಗರವು ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ?

ಹಿಂದೂಗಳ ಪ್ರತಿಯೊಂದು ಹಬ್ಬ ಮತ್ತು ಉತ್ಸವದ ಸಮಯದಲ್ಲಿ, ದೇಶದಲ್ಲಿ ಅಶಾಂತಿಯನ್ನು ಹರಡುತ್ತಿರುವ ಮತಾಂಧರ ಅಹಂಕಾರವನ್ನು ಹತ್ತಿಕ್ಕಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ !

ಹಿಂದೂ ದ್ವೇಷವನ್ನು ಮಾಡುವುದರಲ್ಲಿ ಮುಸಲ್ಮಾನ ಮಹಿಳೆಯರು ಮುಸಲ್ಮಾನ ಪುರುಷರಿಗಿಂತ ಸ್ವಲ್ಪವೂ ಹಿಂದೆ ಬಿದ್ದಿಲ್ಲ ಎಂಬುದು ಇದರಿಂದ ಕಾಣಿಸುತ್ತದೆ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳು ಒತ್ತಾಯಿಸುವರೇ ?