ಹುಬ್ಬಳ್ಳಿ (ಕರ್ನಾಟಕ)ಯಲ್ಲಿ ಹಿಂದೂ ವ್ಯಕ್ತಿಯ ಬಲವಂತವಾಗಿ ಮತಾಂತರ

  • ಸುಂತಾ ಮಾಡಿ ಗೋಮಾಂಸ ಬಲವಂತವಾಗಿ ತಿನಿಸಿದರು !

  • ಮತಾಂತರವಾಗಿರುವವರ ಮೇಲೆ ಕನಿಷ್ಠ ೩ ಹಿಂದೂಗಳ ಮತಾಂತರ ಮಾಡಲು ಒತ್ತಡ !

ಹುಬ್ಬಳ್ಳಿ – ಇಲ್ಲಿಯ ಶ್ರೀಧರ ಗಂಗಾಧರ ಎಂಬ ದಲಿತ ಹಿಂದೂವಿನ ಬಲವಂತವಾಗಿ ಮತಾಂತರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ೧೨ ಜನರ ವಿರುದ್ಧ ದೂರು ದಾಖಲಿಸಲಾಗಿದೆ; ಆದರೆ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ.


ಗಂಗಾಧರ ಇವರು ನೀಡಿರುವ ದೂರಿನಲ್ಲಿ, ಮಂಡ್ಯ ಜಿಲ್ಲೆಯಲ್ಲಿನ ಅತ್ತಾವರ ರೆಹಮಾನ್ ಎಂಬ ವ್ಯಕ್ತಿಯ ಸಂಪರ್ಕಕ್ಕೆ ಅವನು ಬಂದಿದ್ದನು. ರೆಹಮಾನ್ ಇವನು ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಅಜೀಜ್ ಎಂಬ ವ್ಯಕ್ತಿ ಅವನಿಗೆ ಇಸ್ಲಾಂ ಆಯತ (ವಾಕ್ಯಗಳು) ಕಲಿಸಲು ಆರಂಭಿಸಿದನು. ಅದರ ನಂತರ ಅವನಿಗೆ ಅಲ್ಲಿಯ ಅನೇಕ ಮಸೀದಿಗಳಿಗೆ ಕರೆದುಕೊಂಡು ಹೋಗಲಾಯಿತು. ಅದರ ನಂತರ ಅವನ ಸುಂತಾ ಮಾಡಲಾಯಿತು ಹಾಗೂ ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಯಾವಾಗ ಅವನು ಗೋಮಾಂಸ ತಿನ್ನಲು ನಿರಾಕರಿಸಿದನೋ ಆಗ ಅವನಿಗೆ ಥಳಿಸಲಾಯಿತು. ಅದಲ್ಲದೆ ಕನಿಷ್ಠ ೩ ಹಿಂದುಗಳನ್ನು ಇಸ್ಲಾಂ ಧರ್ಮಕ್ಕೆ ತರುವುದಕ್ಕೆ ಅವನ ಮೇಲೆ ಒತ್ತಡ ಹೇರಲಾಯಿತು. ಒಂದು ದಿನ ಅವನು ಕೈಯಲ್ಲಿ ಬಂದುಕೂ ಹಿಡಿದಿರುವ ಛಾಯಾಚಿತ್ರ ಕೂಡ ತೆಗೆಯಲಾಯಿತು.

ಸಂಪಾದಕೀಯ ನಿಲುವು

  • ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರಿಂದ ಈ ರೀತಿಯ ಘಟನೆ ನಡೆಯುವುದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
  • ಕರ್ನಾಟಕದಲ್ಲಿನ ಭಾಜಪದ ಸರಕಾರ ಇರುವಾಗ ಮತಾಂಧರಿಂದ ಈ ರೀತಿಯ ಕೃತ್ಯ ನಡೆಸುವ ಧೈರ್ಯ ಮಾಡಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !