ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ ವಾದಿ ಮತ್ತು ಪ್ರತಿವಾದಿಗೆ ಆದೇಶದ ಪ್ರತಿ ನೀಡಲಾಯಿತು !

ಸರ್ವೋಚ್ಚ ನ್ಯಾಯಾಲಯದಿಂದ ವಿಚಾರಣೆ ನಡೆಸಲು ಆದೇಶ

ನವದೆಹಲಿ – ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಲಯವು ನೀಡಿರುವ ತೀರ್ಪನ ವಿರುದ್ಧ ಆದೇಶದ ಪ್ರತಿಯನ್ನು ವಾದಿ ಮತ್ತು ಪ್ರತಿವಾದಿಗಳಿಗೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ‘ಇದು ಗಂಭೀರ ಘಟನೆ ಆಗಿದೆ’, ಎಂದು ಹೇಳುತ್ತಾ ಆಶ್ಚರ್ಯ ವ್ಯಕ್ತಪಡಿಸಿ ಇದರ ವಿಚಾರಣೆ ನಡೆಸಬೇಕೆಂದು ಆದೇಶ ನೀಡಿದೆ. ವಿಚಾರಣೆಯ ವರದಿ ಪ್ರಸ್ತುತಪಡಿಸಲು ಸಹ ಹೇಳಲಾಗಿದೆ.

ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿನ ಒಂದು ಪಕ್ಷದ ನ್ಯಾಯವಾದಿ ಸುಬ್ರಹ್ಮಣ್ಯಂ ಇವರು ಸರ್ವೋಚ್ಚ ನ್ಯಾಯಾಲಯಕ್ಕೆ ಉಚ್ಚ ನ್ಯಾಯಾಲಯದ ತೀರ್ಪಿನ ಎರಡು ಪ್ರತಿಗಳು ಪ್ರಸ್ತುತಪಡಿಸಿದ್ದಾರೆ. ಇದರಲ್ಲಿನ ಒಂದು ಉಚ್ಚ ನ್ಯಾಯಾಲಯದ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿತ್ತು ಹಾಗೂ ಇನ್ನೊಂದು ಉಚ್ಚ ನ್ಯಾಯಾಲಯದಿಂದ ನೀಡಲಾಗಿತ್ತು. ಎರಡು ಪ್ರತಿಗಳಲ್ಲಿ ದೊಡ್ಡ ಅಂತರವೇ ಇದೆ. ಈ ಆದೇಶದಲ್ಲಿ ಒಂದು ಪಕ್ಷಕ್ಕೆ ಅಣ್ಣ ನಗರ ಬ್ಯಾಂಕಿನಲ್ಲಿ ೧೧೫ ಕೋಟಿ ರೂಪಾಯಿ ಜಮಾ ಮಾಡಲು ಹೇಳಲಾಗಿದೆ; ಆದರೆ ಇನ್ನೊಂದು ಆದೇಶದ ಪ್ರತಿಯಿಂದ ಈ ಉಲ್ಲೇಖ ತೆಗೆದು ಹಾಕಲಾಗಿತ್ತು.

ಸಂಪಾದಕೀಯ ನಿಲುವು

ನ್ಯಾಯಾಲಯದಲ್ಲೇ ಈ ರೀತಿಯ ಮೋಸ ನಡೆಯುತ್ತಿದ್ದರೇ ಜನರು ಇನ್ನು ಯಾರ ಬಳಿ ಹೋಗಬೇಕು ?