‘ಪಿ.ಎಫ್.ಐ.ನ ಮಹಾರಾಷ್ಟ್ರ ಅಧ್ಯಕ್ಷನಿಗೆ ಸಂಬಾಜಿನಗರದಿಂದ ಬಂಧನ

ಸಂಭಾಜಿ ನಗರ – ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ವಿರುದ್ಧ ಮಹಾರಾಷ್ಟ್ರದಲ್ಲಿನ ಉಗ್ರ ನಿಗ್ರಹ ದಳದಿಂದ (‘ಎ.ಟಿ.ಎಸ್.) ನೇರ ಕ್ರಮ ಕೈಗೊಳ್ಳಲು ಆರಂಭಿಸಿದೆ. ‘ಎ.ಟಿ.ಎಸ್’ನ ದಳವು ಇಲ್ಲಿಯ ‘ಪಿ.ಎಫ್.ಐ.’ ಸಂಘಟನೆಯ ಮಹಾರಾಷ್ಟ್ರದ ಅಧ್ಯಕ್ಷ ಶೇಖ ನಾಸಿರ ಅಲಿಯಾಸ್ ನದವಿನನ್ನು ಬಂಧಿಸಿದೆ. ನ್ಯಾಯಾಲಯವು ಅಪರಾಧಿ ಶೇಖ ಇವನಿಗೆ ಅಕ್ಟೋಬರ್ ೨ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುತ್ತಿರುವ ಅನುಮಾನದ ಮೇಲೆ ‘ಪಿ.ಎಫ್.ಐ.’ನ ಶೇಖ್ ಇರ್ಫಾನ್ ಶೇಖ್ ಸಲೀಂ ಅಲಿಯಾಸ್ ಇರ್ಫಾನ್ ಮಿಲ್ಲಿ, ಸಯ್ಯದ್ ಫೈಜಲ್ ಸಯ್ಯದ್ ಖಲೀಲ್, ಪರ್ವೇಜ ಖಾನ್ ಮುಜಿಮಿಲ ಖಾನ ಮತ್ತು ಅಬ್ದುಲ್ ಹಾದಿ ಅಬ್ದುಲ್ ರೌಫ ಈ ನಾಲ್ಕು ಜನರನ್ನು ‘ಎ.ಟಿ.ಎಸ್. ನಿಂದ ಈ ಮೊದಲೇ ಬಂಧಿಸಲಾಗಿದೆ. ನಾಸಿರ್ ಶೇಖ್ ಇವನ ವಿಚಾರಣೆ ನಡೆಯುತ್ತಿತ್ತು. ನಾಸಿರ್ ಇವನ ವಿರುದ್ಧ ದೇಶದ್ರೋಹಿ ಸಂಚು ಮಾಡಿರುವ ಆರೋಪವಿದೆ.

ಸಂಪಾದಕೀಯ ನಿಲುವು

ದೇಶ ವಿರೋಧಿ ಚಟುವಟಿಕೆ ನಡೆಸುವವರು ದೇಶ ವಿರೋಧಿ ಆಗಿರುವುದರಿಂದ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು !