‘ಭಾರತ ಸರಕಾರದ ಹಿಂದುತ್ವದ ಧೋರಣೆ ಬಹಿರಂಗವಾಗುತ್ತದೆ !’(ಅಂತೆ) – ಮೆಹಬೂಬಾ ಮುಫ್ತಿ

ಕಾಶ್ಮೀರದ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ‘ರಘುಪತಿ ರಾಘವ್ ರಾಜಾರಾಮ್’ ಎಂಬ ಭಜನೆ ಹೇಳಿಸಿ ಕೊಳ್ಳಲು ಆಕ್ಷೇಪ !

ಶ್ರೀನಗರ (ಜಮ್ಮು – ಕಾಶ್ಮೀರ) – ಕಾಶ್ಮೀರದ ನಾಗಾಮನ ಸರಕಾರಿ ಶಾಲೆಯೊಂದರೆ ವಿದ್ಯಾರ್ಥಿಗಳು ‘ರಘುಪತಿ ರಾಘವ್ ರಾಜಾರಾಮ್’ ಭಜನೆಯನ್ನು ಹಾಡುವ ವೀಡಿಯೊ ಎಲ್ಲೆಡೆ ಪ್ರಸಾರವಾಗಿದೆ. ಇದನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ, ‘ಧಾರ್ಮಿಕ ವಿದ್ವಾಂಸರನ್ನು ಕಾರಾಗೃಹಕ್ಕೆ ತಳ್ಳುವುದು, ಜಾಮಾ ಮಸೀದಿಯನ್ನು ಮುಚ್ಚುವುದು ಮತ್ತು ಈಗ ಶಾಲೆಗಳಲ್ಲಿ ಹಿಂದೂ ಭಜನೆಗಳನ್ನು ಹಾಡಲು ಹೇಳುವುದು, ಇದು ಭಾರತ ಸರಕಾರವು ಹಿಂದುತ್ವದ ಧೋರಣೆಯನ್ನು ಬಹಿರಂಗಪಡಿಸುತ್ತದೆ. ಸರಕಾರದ ಆದೇಶಗಳನ್ನು ತಿರಸ್ಕರಿಸುವುದು ಎಂದರೆ ತನ್ನ ವಿರುದ್ಧ ಅಪರಾಧವನ್ನು ನೋಂದಾಯಿಸಿದ್ದಾಂತಾಗಿದೆ. ಬದಲಾಗುತ್ತಿರುವ ಜಮ್ಮು – ಕಾಶ್ಮೀರಕ್ಕೆ ನಾವು ಬೆಲೆ ತೆತ್ತಬೇಕಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.


ಮೆಹಬೂಬಾ ಮುಫ್ತಿಯವರು ಮಾತನ್ನು ಮುಂದುವರೆಸುತ್ತಾ, ನಾವು ಭಜನೆಗಳನ್ನು ಗೌರವಿಸುತ್ತೇವೆ; ಆದರೆ ಮುಸ್ಲಿಮರಿಂದ ಭಜನೆಗಳನ್ನು ಹೇಳಿಸುವುದು… ಅವರಿಗೆ ಏನು ಮಾಡಲು ಇಚ್ಛೆ ಇದೆ ?ಎಂದು ನನಗೆ ಪ್ರಶ್ನೆ ಮೂಡುತ್ತಿದೆ. ನೀವು ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುತ್ತೀರಿ ಮತ್ತು ನಮಗೆ ಗಾಂಧಿಯವರು ಕಲಿಸಿದ ಪಾಠವನ್ನು ಕಲಿಸುತ್ತೀರಿ. ನಾವು ಗಾಂಧಿಯನ್ನು ತಿಳಿದಿದ್ದೇವೆ ಮತ್ತು ನಂಬುತ್ತೇವೆ.

ಸಂಪಾದಕೀಯ ನಿಲುವು

ಒಂದೆಡೆ ‘ಗಾಂಧಿಯನ್ನು ನಂಬುತ್ತೇವೆ’ ಎಂದು ಹೇಳುವುದು ಮತ್ತೊಂದೆಡೆ ಅವರು ಹಾಡುತ್ತಿದ್ದ ಭಜನೆಯನ್ನು ‘ಅದು ಹಿಂದುಗಳದೆಂದು ವಿರೋಧ ಮಾಡುವುದು, ಇದು ಮೆಹಬೂಬಾ ಮುಫ್ತಿಯವರ ದ್ವಿಮುಖ ನೀತಿಯೇ ಆಗಿದೆ !