ಜಾಲಂಧರದ ‘ಲವ್ಲಿ ಪ್ರೊಫೆಷನಲ್ ವಿದ್ಯಾಪೀಠ’ದಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆ

ಆತ್ಮಹತ್ಯೆಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ !

ಜಾಲಂಧರ (ಪಂಜಾಬ) – ಜಾಲಂಧರದಲ್ಲಿನ ‘ಲವ್ಲಿ ಪ್ರೊಫೆಷನಲ್ ವಿದ್ಯಾಪೀಠ’ದ ವಸತಿ ಗೃಹದಲ್ಲಿ ಒಬ್ಬ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳದ ಏಜಿನ್ ಎಸ್ ದಿಲೀಪ್ ಕುಮಾರ ಎಂದು ಆತನ ಹೆಸರಾಗಿದೆ. ಅವನ ಹತ್ತಿರ ಆತ್ಮಹತ್ಯೆಕ್ಕೂ ಮುನ್ನ ಒಂದು ಪತ್ರ ಕೂಡ ಪತ್ತೆಯಾಗಿದೆ. ಈ ಘಟನೆ ಸಪ್ಟೆಂಬರ್ ೨೦ ರಂದು ರಾತ್ರಿ ನಡೆದಿದೆ. ಇದರ ನಂತರ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು. ಅದನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ ಸಹ ಮಾಡಿದರು. ಅದರಲ್ಲಿ ಕೆಲವು ವಿದ್ಯಾರ್ಥಿ ಗಾಯಗೊಂಡರು. ವಿದ್ಯಾರ್ಥಿಗಳು ವಿದ್ಯಾಪೀಠದ ಆಡಳಿತದ ವಿರುದ್ಧ ಘೋಷಣೆ ಕೂಗಿದರು. ‘ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ಬದುಕಿಸಬಹುದಾಗಿತ್ತು; ಆದರೆ ಆಂಬುಲನ್ಸ್ ವಿದ್ಯಾಪೀಠಕ್ಕೆ ತಡವಾಗಿ ಬಂದಿತು’, ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅದರ ಜೊತೆಗೆ ‘ಮೃತನ ಕೊಠಡಿಯಿಂದ ದೊರೆತಿರುವ ಪತ್ರ ಬಹಿರಂಗಪಡಿಸಬೇಕೆಂದು’ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದರು.

೧. ಪೊಲೀಸರು ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿತ್ತು; ಆದರೆ ವಿದ್ಯಾರ್ಥಿಗಳು ಆಂಬುಲೆನ್ಸಿನ ಮಾರ್ಗ ತಡೆದರು. ಬಹಳಷ್ಟು ಪ್ರಯತ್ನ ಪಟ್ಟ ನಂತರ ಆಂಬುಲೆನ್ಸ್ ಬೇರೆ ಮಾರ್ಗದಿಂದ ಹೊರಗೆ ತೆಗೆಯಲಾಯಿತು.

೨. ಪೋಲಿಸ್ ಅಧಿಕಾರಿ ವಿದ್ಯಾರ್ಥಿಗಳಿಗೆ ಅವರ ಅಭಿಪ್ರಾಯ ನಮೂದಿಸಲು ಹೇಳುತ್ತಿದ್ದರು. ‘ಯಾರು ತಪ್ಪಿತಸ್ಥರಿರುವರು, ಅವರ ಮೇಲೆ ಕಾನೂನರೀತ್ಯ ಕ್ರಮ ಕೈಗೊಳ್ಳುವೆವು’, ಎಂದು ಪೊಲೀಸರು ಹೇಳಿದರು; ಆದರೆ ವಿದ್ಯಾರ್ಥಿಗಳು ಇದಕ್ಕೆ ಒಪ್ಪಲಿಲ್ಲ. ‘ಪತ್ರದಲ್ಲಿ ಯಾರ ಹೆಸರು ಬರೆದಿದ್ದಾನೆ ಅವರನ್ನು ಆತ್ಮಹತ್ಯೆಗಾಗಿ ತಪ್ಪಿತಸ್ಥರೆಂದು ಗುರುತಿಸಿ ಅವರನ್ನು ಬಂಧಿಸಬೇಕೆಂದು ವಿದ್ಯಾರ್ಥಿಗಳು ಹೇಳುತ್ತಿದ್ದರು.

೩. ಈಘಟನೆಯ ಕುರಿತು ವಿದ್ಯಾಪೀಠದ ವ್ಯವಸ್ಥಾಪಕರು, ವಸತಿಗೃಹದ ಕೊಠಡಿಯಿಂದ ವಿದ್ಯಾರ್ಥಿಯ ಪತ್ರ ದೊರೆತಿದೆ. ಅದರಲ್ಲಿ ಅವನು ‘ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’, ಎಂದು ಹೇಳಿದ್ದಾನೆ. ಈ ಸಂಪೂರ್ಣ ಪ್ರಕರಣದ ಅನ್ವೇಷಣೆಯಲ್ಲಿ ಪೊಲೀಸ ಮತ್ತು ಸರಕಾರ ಇವರಿಗೆ ಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು.