ಹಾಸ್ಯ ಕಲಾವಿದ ರಾಜೂ ಶ್ರೀವಾಸ್ತವ ಇವರ ನಿಧನದನಂತರ ಜಿಹಾದಿಗಳಿಂದ ಜಲ್ಲೋಷ (ಮೋಜು) !

ಹಾಸ್ಯ ಕಲಾವಿದ ರಾಜೂ ಶ್ರೀವಾಸ್ತವ

ನವದೆಹಲಿ – ಹಾಸ್ಯ ಕಲಾವಿದ ರಾಜೂ ಶ್ರೀವಾಸ್ತವ ಇವರು ಸಪ್ಟೆಂಬರ ೨೧ ರಂದು ದೆಹಲಿಯ ಆಶ್ಪತ್ರೆಯಲ್ಲಿ ನಿಧನರಾದರು. ತಮ್ಮ ಹಾಸ್ಯ ಶೈಲಿಯಿಂದ ಜಗತ್ತನ್ನೆ ನಗಿಸುವ ಶ್ರೀವಾಸ್ತವ ‘ಉತ್ತರಪ್ರದೇಶ ಫಿಲ್ಮ್ ಡೆವಲಪ್‌ಮೆಂಟ್ ಪರಿಷತ್ತಿ’ನ ಅಧ್ಯಕ್ಷರೂ ಆಗಿದ್ದರು. ಒಂದೆಡೆ ಶ್ರೀವಾಸ್ತವ ಇವರ ನಿಧನದ ನಂತರ ಸಂಪೂರ್ಣ ದೇಶ ದುಃಖದಲ್ಲಿ ಮುಳುಗಿರುವಾಗ ಇನ್ನೊಂದೆಡೆ ಮುಸಲ್ಮಾನ ಜಿಹಾದಿಗಳು ಮೋಜು ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಜಿಹಾದಿಗಳು ಅವರ ಮೃತ್ಯುವಿನ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

ಮುಲ್ಲಾ ಇಬ್ರಾಹಿಮ್ ಎಂಬ ಮುಸಲ್ಮಾನ ವ್ಯಕ್ತಿ ಟ್ವಿಟರ್‌ನಲ್ಲಿ ‘ರಾಜೂ ಶ್ರೀವಾತ್ಸವ ಕಟ್ಟರ್‌ವಾದಿ ಆಗಿದ್ದನು. ಅವನು ವರ್ಣದ್ವೇಷಿ ಹಾಗೂ ಇಸ್ಲಾಮ್‌ವಿರೋಧಿ ಆಗಿದ್ದನು’, ಎಂದು ಟ್ವಿಟ್ ಮಾಡಿದ್ದಾನೆ. ವಸೀಮ ಅಕ್ರಮ ಇವನು, ‘ಜೀವನದ ಕೊನೆಯ ಹಂತದಲ್ಲಿ ರಾಜೂ ಶ್ರೀವಾಸ್ತವ ಇವರು ಮುಸಲ್ಮಾನರಿಗೆ ಬೈದಿದ್ದಾರೆ. ಅವರ ಹಾಸ್ಯ ಮುಖದ ಹಿಂದೆ ಒಂದು ಪಿಶಾಚಿ ಅಡಗಿದ್ದನು’, ಎಂದು ಹೇಳಿದ್ದಾನೆ.

ಪ್ರಧಾನಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಸಂತಾಪ

ರಾಜೂ ಶ್ರೀವಾಸ್ತವ ಇವರ ನಿಧನದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಸಂಪಾತ ಸೂಚಿಸಿದರು. ಪಂಜಾಬ್‌ನ ಮುಖ್ಯಮಂತ್ರಿ ಭಗವಂತಸಿಂಹ ಮಾನ್ ಇವರು ಕೂಡ ಸಂತಾಪ ಸೂಚಿಸಿದರು. ರಾಜ್ಯಪಾಲ ಯಾದವ, ಕಿಕೂ ಶಾರದಾ, ಹೃತಿಕ್ ರೊಶನ್, ಸೋನೂ ಸೂದ, ಅನುಪಮ ಖೇರ್ ಮತ್ತು ಕೈಲಾಸ ಖೇರ್ ಮುಂತಾದ ಕಲಾವಿದರು ಕೂಡ ಸಂತಾಪ ಸೂಚಿಸಿದರು.

ಸಂಪಾದಕೀಯ ನಿಲುವು

ಹಿಂದೂಗಳು ಹೀಗೆ ಮಾಡಿರುತ್ತಿದ್ದರೆ, ಎಲ್ಲ ಜಾತ್ಯತೀತರು, ಮಾನವಾಧಿಕಾರದವರು ಹಾಗೂ ಪ್ರಗತಿ(ಅಧೋಗತಿ)ಪರರು ಹಿಂದೂಗಳ ಮೇಲೆ ಟೀಕೆ ಮಾಡುತ್ತಿದ್ದರು. ಇಲ್ಲಿ ಮೋಜು ಮಾಡುವವರು ‘ಒಂದು ವಿಶಿಷ್ಟ ಸಮಾಜ’ದವರಾಗಿದ್ದ ಕಾರಣ ಎಲ್ಲರೂ ಶಾಂತರಾಗಿದ್ದಾರೆ !