ಉತ್ತರ ಪ್ರದೇಶದಲ್ಲಿನ ಗೌತಮ ಬುದ್ಧನಗರ ಜಿಲ್ಲೆಯಲ್ಲಿ ಪೊಲೀಸರು ಮತ್ತು ಗೋವು ಕಳ್ಳ ಸಾಗಾಣೆದಾರರ ನಡುವೆ ಚಕಮಕಿ

ಗೌತಮ ಬುದ್ಧ ನಗರ – ಉತ್ತರ ಪ್ರದೇಶದಲ್ಲಿನ ಗೌತಮ ಬುದ್ಧ ನಗರ ಜಿಲ್ಲೆಯ ಪೊಲೀಸರು ಮತ್ತು ಗೋವು ಕಳ್ಳ ಸಾಗಾಣೆದಾರರ ನಡುವೆ ಸೆಪ್ಟೆಂಬರ್ ೧೮ ರಂದು ರಾತ್ರಿ ಚಿಕಮಕಿ ನಡೆಯಿತು. ಈ ಚಕಮಕಿಯಲ್ಲಿ ಗೋವು ಕಳ್ಳ ಸಾಗಾಣೆದಾರ ತಾಜು ಇವನ ಕಾಲಿಗೆ ಗುಂಡು ತಾಗಿ ಗಾಯಗೊಂಡನು. ಪೊಲೀಸರು ತಾಜು ಇವನನ್ನು ಬಂಧಿಸಿದ್ದಾರೆ. ಪೊಲೀಸರು ತಾಜು ಇವನ ಮೇಲೆ ೨೫ ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ತಾಜುವಿನ ಸಹಚರರನ್ನು ಪೊಲೀಸರು ಹುಡುಕುತ್ತಿದ್ದಾರೆ.

೧. ಗ್ರೇಟರ್ ನೋಯಡಾದ ಪೊಲೀಸ್ ಆಯುಕ್ತರಾದ ವಿಶಾಲ ಪಾಂಡೆ ಇವರು, ೪ ಗೋವು ಕಳ್ಳ ಸಾಗಾಣಿಕೆದಾರರು ಒಂದು ಹಸುವನ್ನು ಕೊಲ್ಲುವ ಯೋಜನೆ ಮಾಡಿರುವ ಮಾಹಿತಿ ಸಿಕ್ಕಿತು. ಅದನ್ನು ತಡೆಯಲು ಪೊಲೀಸದಳ ಅಲ್ಲಿಗೆ ತಲುಪಿತ್ತು. ಎಂದು ಹೇಳಿದರು.

೨. ಈ ಸಮಯದಲ್ಲಿ ಪೊಲೀಸರು ಮತ್ತು ಗೋಕಳ್ಳ ಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು. ಪೊಲೀಸರು ತಾಜು ಇವನಿಗೆ ಶರಣಾಗುವಂತೆ ಹೇಳಿದರು, ಆಗ ಅವನು ಗುಂಡು ಹಾರಿಸಿದನು. ಅದರ ನಂತರ ಪೊಲೀಸರು ಕೂಡ ಸ್ವಂತ ರಕ್ಷಣೆಗಾಗಿ ಗುಂಡು ಹಾರಿಸಿದರು.

೩. ತಾಜುನ ಕಾಲಿಗೆ ಗುಂಡು ತಾಗಿ ಗಾಯಗೊಂಡನು. ಪೊಲೀಸರು ಅವನ ಪರಿಶೀಲನೆ ನಡೆಸಿದಾಗ ಅವನ ಹತ್ತಿರ ಒಂದು ಬಂದುಕೂ ಮತ್ತು ಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಮುಂದಿನ ಅನ್ವೇಷಣೆ ನಡೆಸಲಾಗುತ್ತಿದೆ. (ಗೋ ಹತ್ಯೆಯ ವಿರುದ್ಧ ಸತರ್ಕರಾಗಿದ್ದು ಕ್ರಮ ಕೈಗೊಳ್ಳುವ ನೊಯಡಾ ಪೊಲೀಸರ ಅಭಿನಂದನೆ ! – ಸಂಪಾದಕರು)