ಮೇಲ್ಜಾತಿಯಿಂದ ಬಂದ ಬಡವರಿಗೆ ಮೀಸಲಾತಿ ಏಕೆ ನೀಡಲು ಸಾಧ್ಯವಿಲ್ಲ ? – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಮೇಲ್ಜಾತಿಯಿಂದ ಬಂದ ಬಡವರಿಗಾಗಿ ಮೀಸಲಾತಿಯ ವ್ಯವಸ್ಥೆಯ ವಿರುದ್ಧ ದಾಖಲಿಸಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆ ಸಮಯದಲ್ಲಿ ‘ಉಚ್ಚ ಜಾತಿಯಲ್ಲಿನ ಬಡವರಿಗೆ ಮೀಸಲಾತಿ ಏಕೆ ಬೇಡ ?’, ಎಂದು ನ್ಯಾಯಮೂರ್ತಿಯವರು ಅರ್ಜಿದಾರರ ನ್ಯಾಯವಾದಿಗೆ ಪ್ರಶ್ನೆ ಕೇಳಿದರು. ಅರ್ಜಿದಾರರು ೧೦೩ ಸಂವಿಧಾನ ತಿದ್ದುಪಡಿಯು ಸಂವಿಧಾನ ವಿರೋಧಿ ಆಗಿದೆ ಎಂದು ಹೇಳಿದರು. ಮೀಸಲಾತಿಯ ವ್ಯವಸ್ಥೆ ಆರ್ಥಿಕ ಮಾನದಂಡದಿಂದ ಮಾಡಲಾಗುವುದಿಲ್ಲ, ಎಂದು ಯುಕ್ತಿವಾದ ಮಂಡಿಸಿದರು. ಈ ಕುರಿತು ಸರ್ವೋಚ್ಚ ನ್ಯಾಯಾಲಯವು, ‘ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಬಡತನ ರೇಖೆಯ ಕೆಳಗೆ ಇದೆ ಮತ್ತು ಬಡತನದಿಂದ ಅವರು ಒಳ್ಳೆಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಅವರಿಗೆ ಬಡತನದ ಆಧಾರದ ಮೇಲೆ ಮೀಸಲಾತಿ ನೀಡಲು ಏಕೆ ಸಾಧ್ಯವಿಲ್ಲ ?’, ಎಂದು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರ ನ್ಯಾಯವಾದಿಗೆ ಪ್ರಶ್ನೆ ಕೇಳಿದರು.

ನ್ಯಾಯಾಧೀಶ ಉದಯ ಲಳಿತ, ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ಟ, ನ್ಯಾಯಮೂರ್ತಿ ಬೇಲಾ ತ್ರಿವೇದಿ ಮತ್ತು ನ್ಯಾಯಮೂರ್ತಿ ಜೆ.ಪಿ. ಪರ್ಡಿವಾಲ ಇವರ ನ್ಯಾಯ ಪೀಠದಿಂದ ಬಡವರಿಗೆ ಸಾಮಾಜಿಕ ವರ್ಗ ಎಂದು ಏಕೆ ತಿಳಿಯಲು ಸಾಧ್ಯವಿಲ್ಲ, ಎಂದು ವಿಚಾರಣೆಯ ಸಮಯದಲ್ಲಿ ಕೇಳಿದರು.