ಹಿಂದೂಗಳು ಪುನಃ ಮಕ್ಕಾದಲ್ಲಿರುವ ಮಕ್ಕೇಶ್ವರ ಮಹಾದೇವ ದೇವಸ್ಥಾನದ ಮೇಲೆ ನಿಯಂತ್ರಣವನ್ನು ಹೊಂದುವರು !

ಪುರೀ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !

ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪ್ರಯಾಗರಾಜ (ಉತ್ತರಪ್ರದೇಶ) – ಸೌದಿ ಅರೇಬಿಯಾದಲ್ಲಿನ ಮಕ್ಕಾದಲ್ಲಿರುವ ಮಕ್ಕೇಶ್ವರ ಮಹಾದೇವ ದೇವಸ್ಥಾನವನ್ನು ಕೆಡವಿ ಮುಸಲ್ಮಾನ ಆಕ್ರಮಣಕಾರರು ಅದನ್ನು ‘ಮಕ್ಕಾ’ವನ್ನಾಗಿಸಿದರು. ಒಂದು ದಿನ ಹಿಂದೂಗಳೂ ಆ ದೇವಸ್ಥಾನವನ್ನು ಪುನಃ ವಶಕ್ಕೆ ಪಡೆಯುವರು; ಏಕೆಂದರೆ ಮಕ್ಕೇಶ್ವರ ಮಹಾದೇವನು ಹಿಂದೂಗಳ ಶ್ರದ್ಧೆಯ ಕೇಂದ್ರವಾಗಿದ್ದಾನೆ, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಪ್ರತಿಪಾದಿಸಿದ್ದಾರೆ. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅವರು ಈ ಸಮಯದಲ್ಲಿ ‘ಸದ್ಯ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಡೆಯುತ್ತಿದೆ. ಆದಷ್ಟು ಬೇಗ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗುವುದು’ ಎಂದೂ ಹೇಳಿದ್ದಾರೆ.

ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಮಂಡಿಸಿದ ಅಂಶಗಳು

೧. ಭಾರತದಲ್ಲಿ ಅನೇಕ ಮಠ ಹಾಗೂ ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಇಂತಹ ಹೇಯ ಕಾರ್ಯವನ್ನು ಸನಾತನ ಧರ್ಮೀಯರನ್ನು ಮತಾಂತರಗೊಳಿಸಲು ಮಾಡಲಾಗಿತ್ತು. ಈಗ ಸನಾತನ ಧರ್ಮೀಯರು ಗುಲಾಮಗಿರಿಯ ಭಾವನೆಯಿಂದ ಮುಕ್ತರಾಗುತ್ತಿದ್ದಾರೆ. ಅವರು ಏನನ್ನು ಕಳೆದುಕೊಂಡಿದ್ದರೋ ಅದನ್ನು ಪುನಃ ಪಡೆಯುವ ಉತ್ಸಾಹ ಅವರಲ್ಲಿ ನಿರ್ಮಾಣವಾಗುತ್ತಿದೆ.

೨. ಕುಟುಂಬ ಯೋಜನೆಯನ್ನು ಮುಸಲ್ಮಾನ ಹಾಗೂ ಕ್ರೈಸ್ತರು ನಂಬುವುದಿಲ್ಲ. ಇದನ್ನು ಕೇವಲ ಹಿಂದೂಗಳು ನಂಬುತ್ತಾರೆ ಹಾಗೂ ಇದರಿಂದಾಗಿ ಅವರ ಸಂಖ್ಯೆಯು ಕಡಿಮೆಯಾಗುತ್ತಿದೆ. ಹಿಂದೂಗಳು ಹಿಂದೆ ಬ್ರಹ್ಮಚರ್ಯೆಯನ್ನು ಪಾಲಿಸುತ್ತಿದ್ದರು. ಆದುದರಿಂದ ಜನಸಂಖ್ಯೆಯ ಮೇಲೆ ನಿಯಂತ್ರಣವಿರುತ್ತಿತ್ತು. ಈಗ ಪ್ರಾಚೀನ ಪರಂಪರೆಯು ನಷ್ಟವಾಗುತ್ತಿದೆ.

ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿದೆ !

ಜಗತ್ತಿನಲ್ಲಿರುವ ೫೩ ದೇಶಗಳಲ್ಲಿ ಹಿಂದೂಗಳು ವಾಸಿಸುತ್ತಾರೆ. ಕೆಲವು ತಿಂಗಳ ಹಿಂದೆ ಹಿಂದೂಗಳ ಒಂದು ಸಮ್ಮೇಳನ ನಡೆದಿತ್ತು. ಅದರಲ್ಲಿ ವಿದೇಶದಲ್ಲಿನ ಅನೇಕ ಹಿಂದೂಗಳು ಸಹಭಾಗಿಯಾಗಿದ್ದರು. ಅವರು ‘ಭಾರತದ ರಾಜಕೀಯ ದಿಶಾಹೀನತೆಯಿಂದಾಗಿ ನಮ್ಮ ಕೈ-ಕಾಲು ಕಟ್ಟಲಾಗಿವೆ’ ಎಂದು ಹೇಳುತ್ತಿದ್ದರು. ಯಾವ ದಿನ ಭಾರತವು ತನ್ನನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದೋ ಆನಂತರ ಸ್ವಲ್ಪ ಸಮಯದಲ್ಲಿಯೇ ೧೪-೧೫ ದೇಶಗಳು ತಮ್ಮನ್ನು ಹಿಂದೂರಾಷ್ಟ್ರವೆಂದು ಘೋಷಿಸುವವು. ಕೆಲವರಿಗೆ ಇದು ಹೇಗೆ ಆಗಬಲ್ಲುದು ? ಎಂದು ಅನಿಸಬಹುದು. ಎಲ್ಲರೂ ಒಂದು ಮಾತನ್ನು ಒಪ್ಪಲೇ ಬೇಕು ಅದು ‘ಅನಾದಿಕಾಲದಿಂದ ನಮ್ಮೆಲ್ಲರ ಪೂರ್ವಜರು ಸನಾತನಿ ವೈದಿಕ ಹಿಂದೂಗಳಾಗಿದ್ದರು’ ಎಂಬುದು. ಆದುದರಿಂದಲೇ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಇದನ್ನು ಮುಸಲ್ಮಾನರು ವಿರೋಧಿಸುವುದಿಲ್ಲ; ಏಕೆಂದರೆ ಅವರಿಗೆ ತಮ್ಮ ಪೂರ್ವಜರು ಸನಾತನಿ ಹಿಂದೂಗಳಾಗಿದ್ದರು ಎಂಬುದು ತಿಳಿದಿದೆ.

ಮದರಸಾಗಳ ಸಮೀಕ್ಷೆ ಯೋಗ್ಯವೇ ಆಗಿದೆ !

ಮದರಸಾಗಳ ಮೇಲೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಬಗ್ಗೆ ಆರೋಪವಾಗುತ್ತಿದ್ದರೆ ಅವುಗಳ ಮೇಲೆ ತನಿಖೆ ನಡೆಯಬೇಕು. ಇದರಲ್ಲಿ ಯಾವುದೇ ತಪ್ಪು ಇಲ್ಲ. ಸತ್ಯವು ಬಹಿರಂಗವಾಗಬೇಕು. ಹಾಗೆಯೇ ಮದರಸಾಗಳ ಹೊರತು ಮಠ ಅಥವಾ ದೇವಸ್ಥಾನಗಳ ಮೇಲೆ ಇಂತಹ ಆರೋಪಗಳಾದರೆ ಅವುಗಳ ಮೇಲೂ ತನಿಖೆ ನಡೆಯಬೇಕು. ಆದುದರಿಂದ ಮದರಸಾಗಳ ಸಮೀಕ್ಷೆ ನಡೆಸುವ ನಿರ್ಣಯವು ತಪ್ಪಲ್ಲ. ಏಕೆಂದರೆ ಈ ಹಿಂದೆ ಮದರಸಾಗಳಿಂದ ಆಶ್ಚರ್ಯಕಾರಿ ಪ್ರಕರಣಗಳು ಬಹಿರಂಗವಾಗಿವೆ. ಮದರಸಾಗಳು ಏನು ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಯಾವುದೇ ಸಂಸ್ಥೆಯನ್ನು ಯಾರನ್ನಾದರೂ ತುಳಿಯಲು ಬಳಸಲಾಗುತ್ತಿದ್ದರೆ ಹಾಗೂ ಅಲ್ಲಿ ಭಯೋತ್ಪಾದನಾ ತರಬೇತಿಗಳನ್ನು ನೀಡಲಾಗುತ್ತಿದ್ದರೆ ಅದನ್ನು ಭಯೋತ್ಪಾದನೆಯ ಕೇಂದ್ರ ಎಂದು ಕರೆಯುವುದು ಅಯೋಗ್ಯವಲ್ಲ.

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯರವ ಉತ್ತರಾಧಿಕಾರಿಗಳು ಅಘೋಷಿತ !

ಶಾರದಾ ಹಾಗೂ ಜ್ಯೋತಿಷ ಪೀಠಗಳ ಶಂಕರಾಚಾರ್ಯ ಸ್ವಾಮೀ ಸ್ವರೂಪಾನಾಂದ ಸರಸ್ವತಿಯವರ ದೇಹತ್ಯಾಗದ ನಂತರ ಅವರ ಉತ್ತರಾಧಿಕಾರಿಯನ್ನು ಘೋಷಿಸಲಾಗಿದೆ. ಈ ಬಗ್ಗೆ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಮಾತನಾಡುತ್ತ, ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ತಮ್ಮ ಜೀವನಕಾಲದಲ್ಲಿ ಎಂದಿಗೂ ಯಾರನ್ನೂ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿರಲಿಲ್ಲ. ಯಾರನ್ನು ಈಗ ಘೋಷಿಸಲಾಗಿದೆಯೋ ಅವರು ಅಘೋಷಿತವಾಗಿದ್ದಾರೆ. ‘ಶಂಕರಾಚಾರ್ಯರು ಉತ್ತರಾಧಿಕಾರಿಗಳ ಹೆಸರನ್ನು ಏಕೆ ಘೋಷಿಸಿರಲಿಲ್ಲ ?’ ಎಂಬುದರ ಬಗ್ಗೆ ವಿಚಾರ ಮಾಡುವುದು ಆವಶ್ಯಕವಾಗಿದೆ; ಏಕೆಂದರೆ ಇದು ಸ್ಥಾನದ ಪರಂಪರೆಯಾಗಿದೆ, ಅದನ್ನು ಪಾಲಿಸಬೇಕು’ ಎಂದು ಹೇಳಿದರು.