ಉತ್ತರಪ್ರದೇಶದಲ್ಲಿ ರಸ್ತೆಯ ಅಗಲೀಕರಣದಲ್ಲಿ ಅಡಚಣೆಯನ್ನುಂಟು ಮಾಡಿದ ಮಜಾರ್‌ನನ್ನು ಬುಲ್ಡೋಝರ್‌ನಿಂದ ನೆಲಸಮ !

ಅಲೀಗಡ-ಕಾನ್ಪುರ ರಸ್ತೆಯಲ್ಲಿನ ಮಜಾರನ್ನು ೨ ತಿಂಗಳ ಹಿಂದೆ ಕೆಡಲು ಪ್ರಯತ್ನ ಮಾಡಿದಾಗ ಮುಸಲ್ಮಾನರು ವಿರೋಧಿಸಿದ್ದರು !

(ಮಜಾರ ಎಂದರೆ ಇಸ್ಲಾಮೀ ಪೀರ ಅಥವಾ ಫಕೀರರ ಗೋರಿ)

ಕಾನ್ಪುರ (ಉತ್ತರಪ್ರದೇಶ) – ರಾಜ್ಯದ ಅಲೀಗಡ ಹಾಗೂ ಕಾನ್ಪುರ ನಗರಗಳಲ್ಲಿನ ರಸ್ತೆಯ ಅಗಲೀಕರಣದ ಕಾರ್ಯದಲ್ಲಿ ಒಂದು ಮಜಾರ ಅಡಚಣೆ ಆಗುತ್ತಿದ್ದರಿಂದ ಅದರ ಮೇಲೆ ಬುಲ್ಡೋಝರ್ ನಡೆಸಿ ಅದನ್ನು ನೆಲಸಮ ಮಾಡಲಾಯಿತು. ಮಜಾರ ಕೆಡಹುವ ಮೊದಲು ಸಂಬಂಧಪಟ್ಟ ಜನರಿಗೆ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ೨ ತಿಂಗಳ ಹಿಂದೆ ಇದಕ್ಕೆ ಪ್ರಯತ್ನಿಸಿದಾಗ ಸ್ಥಳೀಯ ಮುಸಲ್ಮಾನರು ಇದನ್ನು ವಿರೋಧಿಸಿ ಅದನ್ನು ಕೆಡಹದಂತೆ ತಡೆದಿದ್ದರು. ಅಂದಿನಿಂದ ಈ ಕಾರ್ಯ ನಿಂತಿತ್ತು.

ಉತ್ತರಪ್ರದೇಶದ ಅಲೀಗಡದಿಂದ ಕಾನ್ಪುರದಲ್ಲಿನ ‘ಜಿಟಿ ರಸ್ತೆ’ಯ ಅಗಲೀಕರಣದ ಕಾರ್ಯವು ರಭಸದಿಂದ ನಡೆದಿದೆ. ಈ ಕಾರ್ಯವನ್ನು ಅಕ್ಟೋಬರ ೨೦೨೩ ರ ವರೆಗೆ ಪೂರ್ಣಗೊಳಿಸುವ ಧ್ಯೇಯವಿದೆ. ಅದರಲ್ಲಿಯೆ ಚೌಬೆಪುರ ಮತ್ತು ಶಿವರಾಜಪುರ ಈ ಊರಿನಲ್ಲಿರುವ ಮಜಾರ ನಡುವೆ ಬರುತ್ತಿದ್ದ ಕಾರಣ ಅದನ್ನು ಕೆಡಹಬೇಕಾಗಿತ್ತು. ಸಪ್ಟೆಂಬರ ೧೪ ರಂದು ಈ ಕಾರ್ಯಾಚರಣೆಯ ಸಮಯದಲ್ಲಿ ಘಟನೆಯ ಸ್ಥಳದಲ್ಲಿ ಬಿಲ್ಲೌರದ ಉಪವಿಭಾಗೀಯ ದಂಡಾಧಿಕಾರಿ ಅಲ್ಕಾ ಲಾಂಬಾ ಮತ್ತು ಪೊಲೀಸ್ ಉಪಾಯುಕ್ತ ವೀಜೇಂದ್ರ ದ್ವಿವೇದಿ ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ಈ ಪ್ರಸಂಗದಲ್ಲಿ ಹಿಂದೂಗಳ ದೇವಸ್ಥಾನವಿರುತ್ತಿದ್ದರೆ ಹಾಗೂ ವಿರೋಧಿಸುವವರು ಹಿಂದೂಗಳೆ ಆಗಿದ್ದರೆ, ಅವರ ವಿರುದ್ಧ ಭಾರತದಾದ್ಯಂತದ ಜಾತ್ಯಾತೀತವಾದಿ ಜಮಾತಿಗಳು ಟೀಕೆ ಮಾಡಿ ‘ವಿಕಾಸವಿರೋಧಿ’ ಎಂದು ಹೇಳುತ್ತಾ ಅವರನ್ನು ಹೀಯಾಳಿಸುತ್ತಿದ್ದರು. ಈ ಪ್ರಕರಣದಲ್ಲಿ ಮುಸಲ್ಮಾನರಿದ್ದ ಕಾರಣ ಈಗ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಈ ಜಮಾತ್ ‘ಮುಸಲ್ಮಾನವಿರೋಧಿ’ ಎಂದು ಸಂಬೋಧಿಸಿ ಹೀಯಾಳಿಸಲು ಆರಂಭಿಸಿದರೆ, ಆಶ್ಚರ್ಯವೆನಿಸಲಿಕ್ಕಿಲ್ಲ !