ಬಿಹಾರದಲ್ಲಿನ ಜಂಗಲರಾಜ !

ಬೇಗುಸರಾಯ (ಬಿಹಾರ) – ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಶ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಮತ್ತು ೮ ಜನರು ಗಾಯಗೊಂಡಿದ್ದಾರೆ. ಈ ಇಬ್ಬರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ೩೦ ಕಿಲೋಮೀಟರ್ ವರೆಗೂ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಅಯೋಧ್ಯ ವೃತ್ತದ ಹತ್ತಿರ ಗುಂಡು ತಗಲಿರುವ ವ್ಯಕ್ತಿ ರಸ್ತೆಯಲ್ಲಿ ಸಾವನ್ನಪ್ಪಿದ್ದಾನೆ ಹಾಗೂ ಬಾಚವಾರ, ಫುಲವಾರಿಯ, ಬರೌನಿ ಮತ್ತು ಚಕಿಯಾ ಪ್ರದೇಶದಲ್ಲಿ ೮ ಜನರು ಗಾಯಗೊಂಡಿದ್ದಾರೆ. ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಬ್ಬರೂ ಗುಂಡಿನ ದಾಳಿ ನಡೆಸುತ್ತಾ ಸಮಸ್ತಿಪೂರದ ಕಡೆಗೆ ಓಡಿ ಹೋಗಿದ್ದಾರೆ. ಗುಂಡಿನ ದಾಳಿಯ ಘಟನೆಯ ನಂತರ ಸುತ್ತಮುತ್ತಲಿನ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
#Begusarai mass shooting news: Seven police officers suspended for negligence, criminals yet to be identified.https://t.co/Wcfnc34oi6
— TIMES NOW (@TimesNow) September 14, 2022
ಈ ವಿಷಯವಾಗಿ ಹೆಚ್ಚುವರಿ ಪೊಲೀಸ್ ಮಹಾಸಂಚಾಲಕ ಜಿತೇಂದ್ರ ಸಿಂಹ ಗಂಗವಾರ್ ಇವರು, ಅಪರಾಧಿಗಳ ಗುರುತು ಹಿಡಿಯಲು ಮತ್ತು ಅವರನ್ನು ಬಂಧಿಸುವದಕ್ಕಾಗಿ ಸಿಸಿಟಿವಿ ಛಾಯಾಚಿತ್ರದ ಸಹಾಯ ತೆಗೆದುಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ದುರ್ಲಕ್ಷ ಮಾಡಿರುವುದರಿಂದ ೭ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. (ಕೇವಲ ಅಮಾನತು ಮಾಡದೆ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !