ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ ರಿಝ್ವಿ) ಇವರಿಗೆ ಸರ್ವೋಚ್ಛ ನ್ಯಾಯಾಲಯದಿಂದ ಜಾಮೀನು

ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ !

ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ ರಿಝ್ವಿ)

ನವ ದೆಹಲಿ – ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ ಇವರಿಗೆ ಸರ್ವೋಚ್ಚ ನ್ಯಾಯಾಲಯವು ನಿಯಮಿತ ಜಾಮೀನು ನೀಡಿದೆ. ಜಿತೇಂದ್ರ ತ್ಯಾಗಿ ಇವರ ಮೇಲೆ ಹರಿದ್ವಾರದಲ್ಲಿನ ಧರ್ಮ ಸಂಸತ್ತಿನಲ್ಲಿ ಇಸ್ಲಾಂ ಮತ್ತು ಪೈಗಂಬರ ಇವರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪವಿದೆ. ಈ ಪ್ರಕರಣದಲ್ಲಿ ಜಿತೇಂದ್ರ ತ್ಯಾಗಿ ಇವರಿಗೆ ಸರ್ವೋಚ್ಚ ನ್ಯಾಯಾಲಯ ೩ ತಿಂಗಳ ಶರತ್ತುಬದ್ಧ ಜಾಮೀನು ನೀಡಿತ್ತು. ಕೆಲವು ತಿಂಗಳ ಹಿಂದೆ ವಸೀಮ್ ರಿಝ್ವಿ ಇವರು ಇಸ್ಲಾಂ ತ್ಯಾಗ ಮಾಡಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಅನಂತರ ಸಂಪೂರ್ಣ ದೇಶದಲ್ಲಿ ಅವರ ಧರ್ಮಾಂತರದ ಚರ್ಚೆ ನಡೆದಿತ್ತು. ಹರಿದ್ವಾರದಲ್ಲಿ ಧರ್ಮಸಂಸತ್ತಿನಲ್ಲಿ ಅವರು ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿರುವುದರಿಂದ ಅವರ ಮೇಲಿನ ವಿರೋಧ ಇನ್ನೂ ಹೆಚ್ಚಾಗಿತ್ತು. ಪೊಲೀಸರು ಅವರ ಮೇಲೆ ಅಪರಾಧವನ್ನು ದಾಖಲಿಸಿ ಅವರನ್ನು ಬಂದಿಸಿದ್ದರು.