ಭಾಗ್ಯನಗರದಲ್ಲಿನ ಉಪಹಾರ ಗೃಹಕ್ಕೆ ಹತ್ತಿದ್ದ ಬೆಂಕಿಯಲ್ಲಿ ೮ ಜನರ ಸಾವು !

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಒಂದು ಉಪಹಾರ ಗೃಹಕ್ಕೆ ಸಪ್ಟೆಂಬರ್ ೧೨ ರಂದು ರಾತ್ರಿ ಹತ್ತಿರುವ ಬೆಂಕಿಯಲ್ಲಿ ೮ ಜನರು ಸಾವನ್ನಪ್ಪಿದ್ದಾರೆ. ಉತ್ತರ ವಿಭಾಗದ ಪೊಲೀಸ ಉಪಯುಕ್ತರಾದ ಚಂದನ ದೀಪ್ತಿ ಇವರು, ಉಪಹಾರ ಗೃಹದ ನೆಲೆಮಾಳಿಗೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ರಿಚಾರ್ಜ್ ಯೂನಿಟ್ ಇದೆ. ಎಲೆಕ್ಟ್ರಿಕ್ ಬೈಕ್ ಇಟ್ಟಿರುವ ನೆಲಮಾಳಿಗೆಯಲ್ಲಿ ಈ ಬೆಂಕಿ ಅನಾಹುತ ನಡೆದು ಅಲ್ಲಿಂದ ಬೆಂಕಿ ಪಸರಿಸಿದೆ. ಬೆಂಕಿಯು ಮೊದಲ ಮತ್ತು ಎರಡನೇ ತಗಲಿ ಸುಟ್ಟು ಕರಕಲವಾಯಿತು. ಭಯಂಕರವಾದ ಹೋಗೆಯಿಂದ ಜನರು ಉಸಿರುಗಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಈ ಅನಾಹುತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಅವರು ಅದರಲ್ಲಿ ಸಾವನ್ನಪ್ಪಿರುವ ಪ್ರತಿಯೊಬ್ಬರಿಗೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.