ದೆಹಲಿಯಲ್ಲಿನ ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರಿಂದ ಮತಾಂಧ ಮುಸಲ್ಮಾನರಿಂದ ಮುಸಲ್ಮಾನ ಯುವಕನ ಹತ್ಯೆ

ಅರಮಾನ್

ದೆಹಲಿ – ಇಲ್ಲಿನ ಮಂಗೋಲಪುರಿ ಪ್ರದೇಶದಲ್ಲಿನ ಮುಸಲ್ಮಾನ ಯುವಕ ಅರಮಾನ್ ಇವನನ್ನು ಮುಸಲ್ಮಾನರು ಚಾಕು ಇರಿದು ಹತ್ಯೆ ಮಾಡಿದ್ದಾರೆ. ಅರಮಾನ ಇವನ ತಂದೆ, ‘ಅರಮಾನ ಹನುಮಂತನ ಭಕ್ತನಾಗಿದ್ದನು ಮತ್ತು ಅವನು ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರಿಂದ ಅವನ ಹತ್ಯೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ದಾಳಿಯ ಹಿಂದೆ ವೈಶಮ್ಯ ಇದೆ ಎಂದು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಅರಮಾನನ ಮೋಯಿನ್ ಮತ್ತು ಫರದಿನ ಈ ಇಬ್ಬರು ಸಹೋದರ ಮೇಲೆಯೂ ದಾಳಿ ನಡೆಸಿದ್ದಾರೆ. ಹಾಗೂ ಅರಮಾನನ ಸ್ನೇಹಿತ ವಿಕ್ಕಿ ಮತ್ತು ರವಿ ಇವರ ಮೇಲೆ ಕೂಡ ದಾಳಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಹರೂಖ ಮತ್ತು ಅವನ ಇಬ್ಬರ ಸ್ನೇಹಿತರು ಸೈಫ್ ಮತ್ತು ವಿನಿತ್ ಇವರನ್ನು ಬಂಧಿಸಿದ್ದಾರೆ.

೧. ಅರಮಾನ ಇವನ ಕುಟುಂಬದವರು, ಅರಮಾನ ಭಗವಾನ್ ಶ್ರೀ ಹನುಮಂತನ ಭಕ್ತನಾಗಿದ್ದನು. ಅವನು ಅಖಾಡಾಗೆ ಹೋಗಿ ಶ್ರೀ ಹನುಮಂತನ ಪೂಜೆ ಮಾಡುತ್ತಿದ್ದನು. ಅವನು ಶ್ರೀ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಿದ್ದನು. ಆದ್ದರಿಂದ ಅಸಮಾಧಾನಗೊಂಡ ಶಾಹರೂಖನು ‘ಅರಮಾನನಿಗೆ, ನೀನು ಗುಲಾಲ ಹಚ್ಚಿಕೊಂಡಿರುವೆ ನೀನೆಂತ ಮುಸಲ್ಮಾನನು ? ಎಂದು ಕೇಳಿದ್ದನು. ಅದರ ನಂತರ ಅವನು ತನ್ನ ಸಹಚರರ ಜೊತೆ ಸೇರಿ ಹತ್ಯೆ ಮಾಡಿದನು, ಎಂದು ಹೇಳಿದರು.

೨. ಪೊಲೀಸರು, ಮಧ್ಯಾಹ್ನ ೨.೨೫ ಕ್ಕೆ ಗಾಯಗೊಂಡಿರುವ ಫರಧಿನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅವನ ವಾಹನ ಶಾಹರೂಖನ ವಾಹನಕ್ಕೆ ಗುದ್ದಿತು. ಇದರಿಂದ ಇಬ್ಬರಲ್ಲಿ ವಾದವಿವಾದ ಶುರುವಾಯಿತು. ಆ ಸಮಯದಲ್ಲಿ ಅರಮಾನ ಮಧ್ಯಸ್ಥಿಕೆ ವಹಿಸಿ ವಾದವಿವಾದ ನಿಲ್ಲಿಸುವ ಪ್ರಯತ್ನ ಮಾಡುವಾಗ ಶಾಹರುಖ ಮತ್ತು ಅವನ ಸ್ನೇಹಿತ ಶಾಹಬೀರ ಇವರು ಅವನನ್ನು ಚಾಕುಯಿಂದ ಇರಿದು ಓಡಿ ಹೋದರು, ಎಂದು ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

  • ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿಯೇ ಮಾಡುತ್ತಾರೆ; ಆದರೆ ಹಿಂದೂಗಳ ಹಬ್ಬ ಆಚರಿಸುವ ತಮ್ಮದೇ ಧರ್ಮಬಾಂಧವರ ಮೇಲೆ ಸಹ ದಾಳಿ ಮಾಡುತ್ತಾರೆ. ಈ ವಿಷಯವಾಗಿ ಕಪಟ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮಾತನಾಡುವರೇ ?
  • ನಾಸಿಕನಲ್ಲಿ ಅಜಾನ ಆರಂಭವಾದನಂತರ ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿನ ವಾದ್ಯಗಳನ್ನು ನಿಲ್ಲಿಸಲಾಗಿತ್ತು. ತದ್ವಿರುದ್ಧ ವರ್ತಿಸುವ ಮತಾಂಧರು ಹಿಂದೂಗಳ ಶಿರಛೇದ ನಡೆಸಲು ಸಿದ್ಧರಿರುತ್ತಾರೆ, ಇದನ್ನು ಹಿಂದೂಗಳು ಅರ್ಥಮಾಡಿಕೊಂಡಿರುವ ದಿನವೇ ಸುದಿನ !