ಸುವರ್ಣ ಮಂದಿರದ ಹತ್ತಿರ ತಂಬಾಕು ಮತ್ತು ಮದ್ಯ ಸೇವನೆ ಮಾಡುವವರನ್ನು ನಿಹಂಗ ಸಿಖ್ಕರಿಂದ ಹತ್ಯೆ

(ಶಸ್ತ್ರಸಜ್ಜುತ ಸಿಖ್ಕರನ್ನು ‘ನಿಹಂಗ ಸಿಖ್ಕ’ ಎನ್ನುತ್ತಾರೆ.)

ಪೋಲಿಸ್ ಆಯುಕ್ತ ಅರುಣ ಪಾಲ ಸಿಂಹ

ಮೃತಸರ (ಪಂಜಾಬ) – ಇಲ್ಲಿನ ಪ್ರಸಿದ್ಧ ಸುವರ್ಣ ಮಂದಿರದಿಂದ ೧ ಕಿಲೋಮೀಟರ್ ಅಂತರದಲ್ಲಿ ನಿಹಂಗ ಸಿಖ್ಕರಿಂದ ಒಬ್ಬ ವ್ಯಕ್ತಿಯ ಹತ್ಯೆ ಮಾಡಲಾಗಿದೆ. ಈ ವ್ಯಕ್ತಿ ತಂಬಾಕು ಮತ್ತು ಮದ್ಯ ಸೇವನೆ ಮಾಡಿದ್ದರಿಂದ ಅವನ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ಹೆಸರು ಹರಮನಜೀತ ಸಿಂಹ ಎಂದಾಗಿದೆ. ಈ ಹತ್ಯೆಯ ಘಟನೆ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ.

ಪೋಲಿಸ್ ಆಯುಕ್ತ ಅರುಣ ಪಾಲ ಸಿಂಹ ಇವರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಹರಮನಜೀತ ಸಿಂಹ ಇವನು ತಂಬಾಕು ಮತ್ತು ಮದ್ಯ ಸೇವನೆ ಮಾಡಿದ್ದರಿಂದ ನಿಹಂಗ ಸಿಖ್ಕರು ಅವನ ಮೇಲೆ ದಾಳಿ ನಡೆಸಿದರು. ಘಟನಾ ಸ್ಥಳದಲ್ಲಿ ೬-೭ ಜನರು ಇರುವಾಗಲು ಒಬ್ಬ ವ್ಯಕ್ತಿಯು ಸಹ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಲಿಲ್ಲ, ಇದು ಲಚ್ಚಾಸ್ಪದವಾಗಿದೆ ಎಂದು ಹೇಳಿದರು. (ಪೊಲೀಸರ ಬಗ್ಗೆ ಜನರಲ್ಲಿ ವಿಶ್ವಾಸ ಇಲ್ಲದೆ ಇರುವುದರಿಂದ ಅವರು ಪೊಲೀಸರಿಗೆ ಮಾಹಿತಿ ನೀಡಲು ಮುಂದೆ ಬರುವುದಿಲ್ಲ, ಇದರ ಬಗ್ಗೆ ಸಹ ಪೊಲೀಸರು ಯೋಚಿಸಬೇಕು ! – ಸಂಪಾದಕರು)