ಉತ್ತರಪ್ರದೇಶದ ಚಂದೌಲಿಯಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಮುಸಲ್ಮಾನರಿಂದ ಕಲ್ಲು ತೂರಾಟ

ಚಂದೌಲಿ – ಉತ್ತರಪ್ರದೇಶದ ಚಂದೌಲಿಯಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ತೆಗೆದ ಮೆರವಣಿಗೆಯ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅನಂತರ ಮುಸಲ್ಮಾನರು ಹಿಂದೂಗಳಿಗೆ ಹೊಡೆದರು. ಇದರಲ್ಲಿ ೬ ಜನರು ಗಾಯಗೊಂಡರು, ಹಾಗೂ ಅನೇಕ ವಾಹನಗಳಿಗೆ ಹಾನಿಯಾಯಿತು. ಈ ವಿಷಯದ ಮಾಹಿತಿ ಸಿಕ್ಕಿದ ತಕ್ಷಣ ಅಲೀನಗರ ಹಾಗೂ ಮುಗಲಸರಾಯಿಯಲ್ಲಿನ ಪೊಲೀಸರು ಘಟನೆಯ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಘಟನೆಗೆ ಸಂಬಂಧಿಸಿದ ಒಂದು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.


ಶ್ರೀ ಗಣೇಶೋತ್ಸವದ ಅಂತರ್ಗತ ಅಲೀನಗರದಲ್ಲಿ ಶ್ರೀ ಗಣೇಶಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಮೆರವಣಿಗೆ ತೆಗೆಯಲಾಗಿತ್ತು. ಈ ಮೆರವಣಿಗೆ ಮುಸಲ್ಮಾನರ ವಸತಿಯಲ್ಲಿ ಹೋಗುತ್ತಿರುವಾಗ ಹಟಾತ್ತಾಗಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಆರಂಭವಾಯಿತು. ಅನಂತರ ಹಿಂದೂ ಮತ್ತು ಮುಸಲ್ಮಾನರಲ್ಲಿ ಹೊಡೆದಾಟ ಅರಂಭವಾಯಿತು. ‘ಮುಸಲ್ಮಾನರು ಉದ್ದೇಶಪೂರ್ವಕ ಒಂದು ಪ್ರಾಣಿಯನ್ನು ಮೆರವಣಿಗೆಯಲ್ಲಿ ನುಗ್ಗಿಸಿದರು. ಅದರಿಂದ ವಿವಾದ ನಿರ್ಮಾಣವಾಗಿ ಆ ಮೇಲೆ ಹೊಡೆದಾಟ ಆರಂಭವಾಯಿತು’, ಎಂದು ಹಿಂದೂಗಳು ಆರೋಪಿಸಿದರು.

ಸಂಪಾದಕೀಯ ನಿಲುವು

ಹಿಂದೂಗಳ ಮೆರವಣಿಗೆಯ ಮೇಲೆ ಆಕ್ರಮಣ ಮಾಡಿ ಅವರಿಗೆ ತೊಂದರೆ ಕೊಡುವ ವಿಚಾರವೂ ಅಲ್ಪಸಂಖ್ಯಾಕರ ಮನಸ್ಸಿನಲ್ಲಿ ಬರದಂತೆ ಪೊಲೀಸರು ಭಯ ನಿರ್ಮಾಣ ಮಾಡುವರೇ ?