ಚಲನಚಿತ್ರದಲ್ಲಿನ ತಥ್ಯವನ್ನು ತಪ್ಪು ರೀತಿಯಲ್ಲಿ ತೋರಿಸಿರುವುದಾಗಿ ಆರೋಪಿಸಿ ಪ್ರಸಂಗಗಳನ್ನು ತೆಗೆಯುವಂತೆ ಕೇರಳ ಚಲನಚಿತ್ರ ಮಂಡಳಿಯಿಂದ ಆದೇಶ ! – ಚಲನಚಿತ್ರ ನಿರ್ದೇಶಕ ರಾಮಸಿಂಹನ್‌

ಕೇರಳದಲ್ಲಿನ ಹಿಂದೂಗಳ ಮೊಪಲಾ ಹತ್ಯಾಕಾಂಡದ ವಿಷಯದಲ್ಲಿನ ಚಲನಚಿತ್ರದ ಪ್ರಕರಣ

ತಿರುವನಂತಪುರಮ್‌ (ಕೇರಳ) – ಕೇರಳದ ಚಲನಚಿತ್ರ ಪರೀಕ್ಷಣಾ ಮಂಡಳಿಯು ಜೂನ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆದ ಮೋಪಲಾ ಹತ್ಯಾಕಾಂಡದ ಮೇಲೆ ತಯಾರಿಸಲಾದ ‘ಪುಝ್ಝಾ ಮುತ್ತುಲ ಮುಝ್ಝಾ ವಾರೀ’ (ನದಿಯಿಂದ ನದಿಯ ವರೆಗೆ) ಎಂಬ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತ್ತು. ಚಲನಚಿತ್ರದ ನಿರ್ದೇಶಕರಾದ ರಾಮಸಿಂಹನ್‌ (ಪೂರ್ವಾಶ್ರಮದ ಅಲೀ ಅಕಬರ)ರವರು ಈ ವಿಷಯದಲ್ಲಿ ‘ಮಂಡಳಿಯು ನನ್ನ ಚಲನಚಿತ್ರದ ತಥ್ಯವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಪ್ರಸಂಗಗಳ ಸೋಸುವಿಕೆಗೆ ಆದೇಶಿಸಿದೆ. ಈ ಆದೇಶವು ಮೋಪಲಾ ದಂಗೆಯಲ್ಲಿ ಹಿಂದೂಗಳ ನರಸಂಹಾರ ಮಾಡಿದ ಮುಸಲ್ಮಾನರು ನಿರಪರಾಧಿಗಳು ಎಂದು ಹೇಳುವ ಪ್ರಯತ್ನವಾಗಿದೆ’, ಎಂದು ಹೇಳಿದರು. ೧೯೧೦ರಲ್ಲಿ ಮುಸಲ್ಮಾನರು ಮಾಡಿರುವ ಸಾವಿರಾರು ಹಿಂದೂಗಳ ನರಸಂಹಾರಕ್ಕೆ ‘ಮೋಪಲಾ ಹತ್ಯಾಕಾಂಡ’ ಎಂದು ಹೇಳಲಾಗುತ್ತದೆ.

ಕೇಂದ್ರೀಯ ಸೆನ್ಸಾರ ಮಂಡಳಿಯು ಹಿಂದೂ ಬದಲು ಪೂರ್ವಾಶ್ರಮದ ಮುಸಲ್ಮಾನ ಹೆಸರು ನೀಡುವಂತೆ ಮಾಡಿತು !

ರಾಮಸಿಂಹನ್‌ರವರು ಮಾತನಾಡುತ್ತ, ‘ಕೇಂದ್ರೀಯ ಸೆನ್ಸಾರ ಮಂಡಳಿಯು ನನಗೆ ನನ್ನ ಪೂರ್ವಾಶ್ರಮದ ಅಲೀ ಅಕಬರ ಎಂಬ ಹೆಸರನ್ನು ಚಲನಚಿತ್ರದಲ್ಲಿ ಸೇರಿಸುವಂತೆ ಮಾಡಿತ್ತು. ಮಂಡಳಿಗೆ ಓರ್ವ ಮುಸಲ್ಮಾನನು ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ ಹಾಗೂ ಈಗ ಅವನು ಮುಸಲ್ಮಾನರ ಹಿಂಸಾಚಾರದ ವಿಷಯದಲ್ಲಿ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾನೆ ಎಂಬುದನ್ನು ತೋರಿಸಲಿಕ್ಕಿಲ್ಲ, ಎಂದು ಹೇಳಿದರು. ಅಲೀ ಅಕಬರರವರು ಇದೇ ವರ್ಷ ಜನವರಿ ತಿಂಗಳಿನಲ್ಲಿ ಇಸ್ಲಾಂನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅನಂತರ ಅವರು ತಮ್ಮ ಹೆಸರನ್ನು ರಾಮಸಿಂಹನ್‌ ಎಂದು ಇಟ್ಟಿದ್ದಾರೆ. ೧೯೪೭ರಲ್ಲಿ ಮುಸಲ್ಮಾನರು ರಾಮಸಿಂಹನ್‌, ಅವರ ಸಹೋದರ ದಯಾಸಿಂಹನ್‌, ಅವರ ಪತ್ನಿ ಕಮಲಾ, ಅಡುಗೆಯ ಮಾಡುವ ರಾಜೂ ಅಯ್ಯರ ಹಾಗೂ ಇತರ ಸಂಬಂಧಿಗಳನ್ನು ಅವರು ಇಸ್ಲಾಂನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿದ್ದರಿಂದ ಕೊಂದು ಹಾಕಿದ್ದರು. ಇದರಿಂದಾಗಿಯೇ ಅಲೀ ಅಕಬರರವರು ತಮ್ಮ ಹೆಸರನ್ನು ರಾಮಸಿಂಹನ್‌ ಎಂದು ಇಟ್ಟುಕೊಂಡಿದ್ದಾರೆ.

ಚಲನಚಿತ್ರದ ಪ್ರದರ್ಶನವಾಗದಿರಲು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದಿಂದ ಒತ್ತಡ

ರಾಮಸಿಂಹನ್‌ರವರು ಮುಂದುವರಿದು, ಕೇರಳ ಚಲನಚಿತ್ರ ಮಂಡಳಿಯು ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿದ ನಂತರ ಅದನ್ನು ಕೇಂದ್ರೀಯ ಸೆನ್ಸಾರ ಬೋರ್ಡಗೆ ಕಳುಹಿಸಲಾಯಿತು. ಅಲ್ಲಿ ಅವರು ಕೆಲವು ಪ್ರಸಂಗಗಳನ್ನು ತೆಗೆದು ಹಾಕಲು ಹೇಳಿದ್ದಾರೆ. ನನಗೆ ಕೇರಳದ ಚಲನಚಿತ್ರ ಮಂಡಳಿಯು ಕೇಂದ್ರೀಯ ಮಂಡಳಿಯ ಮೇಲೆ ಒತ್ತಡ ಹೇರಿರುವ ಬಗ್ಗೆ ಅನುಮಾನವಿದೆ. ಹಾಗೆಯೇ ಈ ಚಲನಚಿತ್ರವು ಪ್ರದರ್ಶಿತವಾಗದಿರಲು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾವು ಒತ್ತಡ ನಿರ್ಮಾಣ ಮಾಡುತ್ತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇರಳದ ಸಾಮಾನ್ಯವಾದಿ ಮೈತ್ರಿಕೂಟದ ಸರಕಾರದ ಅಧೀನದಲ್ಲಿರುವ ಚಲನಚಿತ್ರ ಮಂಡಳಿಯು ಇದಕ್ಕಿಂತ ಬೇರೇನು ಮಾಡಬಲ್ಲುದು ? ಇತಿಹಾಸವು ಜಗತ್ತಿನ ಎದುರು ಬಂದಿದೆ, ಅದನ್ನು ಚಲನಚಿತ್ರದಿಂದ ತೋರಿಸಬಾರದು ಎಂದು ಹೇಳಿ ಪರಿಶ್ರಮಿಸುವ ಕೇರಳ ಸರಕಾರದ ಮತಾಂಧರ ಮೇಲಿನ ಪ್ರೇಮ ಹಾಗೂ ಹಿಂದೂವಿರೋಧವನ್ನು ಗಮನದಲ್ಲಿಡಿ !