ಶಾಮಲಿ(ಉತ್ತರಪ್ರದೇಶ)ದಲ್ಲಿ ಗ್ರಾಮದೇವತೆಯ ವಾರ್ಷಿಕ ಕಾರ್ಯಕ್ರಮದ ಮೊದಲು ಮಂದಿರದಲ್ಲಿ ಅಜ್ಞಾತರಿಂದ ಮಾಂಸ ಎಸೆತ !

ಗ್ರಾಮದಲ್ಲಿ ಬಿಗುವಿನ ವಾತಾವರಣ

ಶಾಮಲಿ (ಉತ್ತರಪ್ರದೇಶ) – ಶಾಮಲಿ ಜಿಲ್ಲೆಯ ಸಿಕ್ಕಾ ಗ್ರಾಮದ ಭೂಮಿಯಾ ಖೇಡಾ ಈ ಗ್ರಾಮದೇವತೆಯ ಮಂದಿರದಲ್ಲಿ ಅಜ್ಞಾತರು ಮಾಂಸವನ್ನು ಎಸೆದಿರುವ ಘಟನೆ ನಡೆಯಿತು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತ ಮಾಡಲಾಗಿದೆ.

ಈ ಮಂದಿರದಲ್ಲಿ ಸಪ್ಟೆಂಬರ ೩ರಂದು ವಾರ್ಷಿಕ ಯಜ್ಞ, ಹವನ ಮತ್ತು ಮಹಾಪ್ರಸಾದ ಆಯೋಜಿಸಲಾಗಿತ್ತು. ಅದರ ಮೊದಲು ಮಂದಿರದ ಪರಿಸರದ ೧೧ ಸ್ಥಳಗಳಲ್ಲಿ ಮಾಂಸದ ತುಂಡು ಕಂಡು ಬಂದಿತು. ಈ ಹಿಂದೆ ಗ್ರಾಮದಲ್ಲಿ ಇಂತಹ ಘಟನೆ ಎಂದಿಗೂ ನಡೆದಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಪೊಲೀಸರಿಗೆ ಇದರ ಮಾಹಿತಿಯನ್ನು ನೀಡಿದ ಬಳಿಕ ಪೊಲೀಸರು ಎಲ್ಲ ತುಂಡುಗಳನ್ನು ಸಂಗ್ರಹಿಸಿ ತಪಾಸಣೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು, ಈ ಘಟನೆಯ ವಿಚಾರಣೆ ನಡೆಯುತ್ತಿದೆಯೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಇದರಿಂದ ಹಿಂದೂಗಳ ದೇವತೆಗಳ ಮಂದಿರಗಳನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡುವ ಪ್ರಯತ್ನವಾಗುತ್ತಿರುತ್ತದೆಯೆಂದು ಗಮನಕ್ಕೆ ಬರುತ್ತದೆ ! ಇದರಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಈ ಬಗ್ಗೆ ಕೇಂದ್ರಸರಕಾರ ಕಾನೂನು ರಚಿಸುವ ಆವಶ್ಯಕತೆ !