ಶಬಾನಾ ಆಜ್ಮಿ, ಜಾವೇದ ಅಖ್ತರ, ನಸೀರುದ್ದೀನ ಶಾಹ ಇವರು ‘ತುಕಡೆ ತುಕಡೆ ತಂಡ’ದ ಸ್ಥಳೀಯ ಕೈ ಗಳು ! – ಮಧ್ಯಪ್ರದೇಶದ ಗೃಹಸಚಿವ ನರೋತ್ತಮ ಮಿಶ್ರಾ

ಎಡದಿಂದ ನಟಿ ಶಬಾನಾ ಆಝ್ಮಿ, ಲೇಖಕ ಜಾವೇದ ಅಖ್ತರ, ಗೃಹ ಮಂತ್ರಿ ನರೋತ್ತಮ ಮಿಶ್ರಾ, ನಟ ನಸೀರುದ್ದೀನ ಶಾಹ

ಭೋಪಾಳ (ಮಧ್ಯಪ್ರದೇಶ) – ನಟಿ ಶಬಾನಾ ಆಝ್ಮಿ, ಅವಳ ಪತಿ ಮತ್ತು ಲೇಖಕ ಜಾವೇದ ಅಖ್ತರ, ಹಾಗೆಯೇ ನಟ ನಸೀರುದ್ದೀನ ಶಾಹ ಇವರು ‘ತುಕಡೆ ತುಕಡೆ’(ಭಾರತವನ್ನು ವಿಭಜಿಸುವ ಬೇಡಿಕೆ ಮಾಡುವವರು) ತಂಡದ ‘ಸ್ಲೀಪರ ಸೆಲ್’ (ಸ್ಥಳೀಯ ಕೈ) ಆಗಿದ್ದಾರೆ. ರಾಜಸ್ಥಾನದಲ್ಲಿ ಕನೈಯ್ಯಾಲಾಲರ ಹತ್ಯೆಯಾದಾಗ, ಈ ಜನರ ಬಾಯಿಯಿಂದ ಒಂದು ಶಬ್ದವೂ ಹೊರಬರಲಿಲ್ಲ, ಝಾರಖಂಡ ದುಮ್ಕಾದಲ್ಲಿ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಹತ್ಯೆ ಮಾಡಿದಾಗಲೂ ಈ ಜನರು ಬಾಯಿ ಮುಚ್ಚಿಕೊಂಡಿದ್ದರು, ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾ ಟೀಕಿಸಿದ್ದಾರೆ.

ಗುಜರಾತ ಗಲಭೆಯ ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದ ದೋಷಿಯ ಶಿಕ್ಷೆಯನ್ನು ಕ್ಷಮಿಸಿರುವ ಬಗ್ಗೆ ಶಬಾನಾ ಆಝ್ಮಿಯವರು ಟೀಕಿಸಿದ್ದರು. ಆ ಬಗ್ಗೆ ಮಿಶ್ರಾ ಮೇಲಿನಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.